March 17, 2026

ಆಟೋ ಮೇಲೆ ಕಾಡಾನೆಗಳ ಹಿಂಡು ದಾಳಿ: ಮಹಿಳೆ, ಚಾಲಕ ಇಬ್ಬರು ಪ್ರಾಣಾಪಾಯದಿಂದ ಪಾರು

0
image_editor_output_image590661993-1714106549908.jpg

ಹಾಸನ : ಬೆಳ್ಳಂಬೆಳಗ್ಗೆ ಕಾಡಾನೆಗಳ ಹಿಂಡು ದಾಳಿ ಮಾಡಿದ ಪರಿಣಾಮ ಆಟೋ ರಿಕ್ಷಾವೊಂದರ ಮೇಲೆ ದಾಳಿ ಮಾಡಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಗುಜ್ಜನಹಳ್ಳಿ ತಿರುವಿನ ಮಿಷನ್ ಕಾಡಿನ ಬಳಿ ನಡೆದಿದೆ.

ಘಟನೆಯಲ್ಲಿ ಆಟೋ ಚಾಲಕ ಮತ್ತು ಪ್ರಯಾಣಿಕ ಮಹಿಳೆ ಪವಾಡ ಸದೃಶ್ಯರಾಗಿ ಅಲ್ಪಸ್ವಲ್ಪಗಾಯಗಳೊಂದಿಗೆ ಪಾರಾಗಿದ್ದಾರೆ.

ಆಟೋ ಚಾಲಕ ಮೋಹನ್ ಅವರು ಮಹಿಳಾ ಪ್ರಯಾಣಿಕರೊಬ್ಬರನ್ನು ಕೂರಿಸಿಕೊಂಡು ಗುಜ್ಜನಹಳ್ಳಿ ಗ್ರಾಮದಿಂದ ಅರೇಹಳ್ಳಿಗೆ ಬರುವಂತಹ ಸಂದರ್ಭದಲ್ಲಿ 5 ಕಾಡಾನೆಗಳು ಮಿಷನ್ ಕಾಡಿನ ತಿರುವಿನ ಬಳಿ ಅಡ್ಡಬಂದಿವೆ. ಈ ವೇಳೆ 2 ಕಾಡಾನೆಗಳು ಚಲಿಸುತ್ತಿದ್ದ ಆಟೋ ಮೇಲೆ ದಾಳಿ ಮಾಡಲು ಮುಂದಾದಾಗ ಚಾಲಕ ಮೋಹನ್ ಆಟೋ ಬಿಟ್ಟು ದೂರ ಓಡಿದ್ದಾರೆ.

ಪ್ರಯಾಣಿಕ ಮಹಿಳೆ ಮಾತ್ರ ಆಟೋದಲ್ಲೇ ಬಾಕಿಯಾಗಿ ಪ್ರಾಣ ಭಯದಿಂದ ಕಿರುಚಾಡಲು ಪ್ರಾರಂಭಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕಾಡಾನೆಗಳು ಆಟೋವನ್ನು ರಸ್ತೆಯಿಂದ ತಳ್ಳಿಕೊಂಡು ಚರಂಡಿ ಬಳಿ ದೂಡಿ ಹಾಕಿವೆ.

ಆಟೋ ಮುಂಭಾಗ ಜಖಂ ಆಗಿದೆ ಎಂದು ತಿಳಿದು ಬಂದಿದೆ. ಆಟೋದಲ್ಲಿ ಕಿರುಚಾಡುತ್ತಿದ್ದ ಒಂಟಿ ಮಹಿಳೆಯನ್ನು ಪಾರುಮಾಡಲು ತಾವೂ ಕೂಡ ಜೋರಾಗಿ ಕಿರುಚಿದ್ದರಿಂದ ಆನೆಗಳು ಅಲ್ಲಿಂದ ತೆರಳಿವೆ.

Leave a Reply

Your email address will not be published. Required fields are marked *

You may have missed

error: Content is protected !!