March 17, 2026

ವಿಟ್ಲ:ಬಾವಿಯಲ್ಲಿ ಉಸಿರುಗಟ್ಟಿ ಮೃತಪಟ್ಟ   ಇಬ್ರಾಹಿಂ ಕುಕ್ಕಿಲ  ಮಕ್ಕಳಿಗೆ ವಿಟ್ಲ ಜಮಾಅತ್ ನ  ಹೊರೈಝನ್ ಶಾಲೆಯಲ್ಲಿ ಉಚಿತ ವಿದ್ಯಾಭ್ಯಾಸ

0
image_editor_output_image2056844532-1713966074089

ವಿಟ್ಲ; ಎಪ್ರಿಲ್ 23 ರ ಮಂಗಳವಾರದಂದು ವಿಟ್ಲ ಸಮೀಪದ ಪಡಿಬಾಗಿಲು ಎಂಬಲ್ಲಿ ಬಾವಿಗೆ ರಿಂಗ್ ಅಳವಡಿಸುವಾಗ ಉಸಿರುಗಟ್ಟಿ ಮೃತರಾದ ಇಬ್ರಾಹಿಂ ಕುಕ್ಕಿಲ ಇವರ ಮನೆಗೆ ವಿಟ್ಲ ಜಮಾತ್ ಅಧ್ಯಕ್ಷ ಆಶ್ರಫ್ ಮೊಹಮ್ಮದ್ ಪೊನ್ನಟು, ಉಪಾಧ್ಯಕ್ಷ ಮೊಹಮ್ಮದ್ ಗಮಿ, ಜಮಾಅತ್ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ಆಡಳಿತ ಸಮಿತಿ ಕಾರ್ಯದರ್ಶಿ ನೋಟರಿ ವಕೀಲ ಕೆ. ಅಬೂಬಕರ್, ವಿಟ್ಲ ಜಮಾಅತ್ ಖತೀಬ್ ಅಬ್ಬಾಸ್ ಪೈಝಿ, ಮುಅಝೀನ್ ಹಕೀಮ್ ಮುಸ್ಲಿಯಾರ್ ಬೇಟಿ ನೀಡಿ ಸಂತಾಪ ಸೂಚಿಸಿದರು.
ಮೃತರ ಇಬ್ಬರು ಮಕ್ಕಳಾದ ಮೊಹಮ್ಮದ್ ಇರ್ಫಾನ್ 5ನೇ ತರಗತಿ ಮತ್ತು ಮೊಹಮ್ಮದ್ ಇಶಾನ್ 3ನೇ ತರಗತಿಯಲ್ಲಿ ವಿಟ್ಲ ಜಮಾತ್ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲಿನಲ್ಲಿ ಕಲಿಯುತ್ತಿದ್ದು ಇವರಿಗೆ ಹತ್ತನೇ ತರಗತಿ ತನಕ ಇದೇ ಶಾಲೆಯಲ್ಲಿ ಉಚಿತ ವಿದ್ಯಾಭ್ಯಾಸ ಕೊಡುವುದಾಗಿ ಜಮಾತ್ ಅಧ್ಯಕ್ಷರು ಹೇಳಿದರು.

Leave a Reply

Your email address will not be published. Required fields are marked *

You may have missed

error: Content is protected !!