ಮಲ್ಪೆ: ಮಲ್ಪೆ ಬೀಚ್ ಪ್ರವಾಸಕ್ಕೆ ಬಂದ ಯುವಕ ಸಮುದ್ರದಲ್ಲಿ ಮುಳುಗಿ ಮೃತ್ಯು
ಮಲ್ಪೆ: ಮಲ್ಪೆ ಬೀಚ್ ಪ್ರವಾಸಕ್ಕೆ ಬಂದ ಯುವಕನೋರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಮಧ್ಯಾಹ್ನ ವೇಳೆ ನಡೆದಿರುವುದಾಗಿ ವರದಿಯಾಗಿದೆ.
ಮೃತರನ್ನು ಮಂಡ್ಯ ಮೂಲದ ನಾಗೇಂದ್ರ(21) ಎಂದು ಗುರುತಿಸಲಾಗಿದೆ.
ಇವರು ಬೆಂಗಳೂರಿನಲ್ಲಿ ಕಲಿಯುತ್ತಿದ್ದು ಒಟ್ಟು ಐವರು ಮಲ್ಪೆ ಬೀಚ್ ಪ್ರವಾಸಕ್ಕೆ ಬಂದಿದ್ದರು.ಇವರೆಲ್ಲ ನೀರಿನಲ್ಲಿ ಆಡುತ್ತಿದ್ದ ವೇಳೆ ನಾಗೇಂದ್ರ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು .





