December 23, 2024

ಎ.22: ವಿಟ್ಲದಲ್ಲಿ ಶ್ರೀ ವಿಘ್ನೇಶ್ವರ ರೂಫಿಂಗ್ಸ್ & ಎಂಜಿನಿಯರಿಂಗ್ ವರ್ಕ್ಸ್, ಕ್ರೈನ್ ಸರ್ವೀಸ್, ಶ್ರೀ ವಿಘ್ನೇಶ್ವರ ಸ್ಟೀಲ್ಸ್ ಸ್ಥಳಾಂತರಗೊಂಡು ಶುಭಾರಂಭ

0

ವಿಟ್ಲ: ಕಳೆದ ಹಲವಾರು ವರುಷಗಳಿಂದ ವಿಟ್ಲ – ಪುತ್ತೂರು ರಸ್ತೆಯ ಮೇಗಿನ ಪೇಟೆಯಲ್ಲಿ ವ್ಯವಹಾರ ನಡೆಸುತ್ತಿದ್ದ ಶ್ರೀ ವಿಘ್ನೇಶ್ವರ ರೂಫಿಂಗ್ಸ್ & ಎಂಜಿನಿಯರಿಂಗ್ ವರ್ಕ್ಸ್, ಕ್ರೈನ್ ಸರ್ವೀಸ್ ಹಾಗೂ ಶ್ರೀ ವಿಘ್ನೇಶ್ವರ ಸ್ಟೀಲ್ಸ್ ಪಕ್ಕದಲ್ಲಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಎ.22ರಂದು ಶುಭಾರಂಭಗೊಳ್ಳಲಿದೆ.
ಸುಮಾರು 17ವರುಷಗಳ ಸೇವಾಪರಂಪರೆಯನ್ನು ಹೊಂದಿರುವ ಸಂಸ್ಥೆ ಆರಂಭದ ದಿನಗಳಿಂದಲೇ ತನ್ನ ಸೇವೆ ಹಾಗೂ ಗುಣಮಟ್ಟದ ಮೂಲಕ ಜನಮಾನಸವನ್ನು ಗೆಲ್ಲುವಲ್ಲಿ ಸಫಲವಾಗಿದ್ದು, ಎಲ್ಲರ ನೆಚ್ಚಿನ ಸಂಸ್ಥೆಯಾಗಿ ಬೆಳೆದಿದೆ.

ಶ್ರೀ ವಿಘ್ನೇಶ್ವರ ರೂಫಿಂಗ್ ಮತ್ತು ಇಂಜಿನಿಯರಿಂಗ್ ವರ್ಕ್ಸ್:
ಶ್ರೀ ವಿಘ್ನೇಶ್ವರ ರೂಫಿಂಗ್ ಮತ್ತು ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ಮನೆ ಮತ್ತು ಕಟ್ಟಡಗಳಿಗೆ ಶೀಟು ಅಳವಡಿಕೆ, ಹಂಚಿನ ಮನೆಯ ಮೇಲ್ಛಾವಣಿಗಳನ್ನು ನಿರ್ಮಿಸಿಕೊಡುವ ವ್ಯವಸ್ಥೆ ಇದೆ. ಜೆ.ಸಿ.ಬಿ., ಟಿಪ್ಪರ್, ಹಿಟಾಚಿ, ರೋಲರ್, ಕ್ರೇನ್,ಕಾಂಕ್ರಿಟ್ ಮಿಲ್ಲಾರ್ ಇತ್ಯಾದಿ ಯಂತ್ರೋಪಕರಣಗಳನ್ನು ಬೂಷಿಂಗ್ ಹೈಡ್ರೋಲಿಕ್ ವರ್ಕ್, ವೆಲ್ಡಿಂಗ್ ಮತ್ತು ಲೇತ್ ವರ್ಕ್ಸ್‌ಗಳನ್ನು ಮಾಡಿಕೊಡಲಾಗುವುದು.

 

 

ಶ್ರೀ ವಿಘ್ನೆಶ್ವರ ಸ್ಟೀಲ್ಸ್:
ಶ್ರೀ ವಿಘ್ನೆಶ್ವರ ಸ್ಟೀಲ್ಸ್ ನಲ್ಲಿ ಟಾಟಾ ಹಾಗೂ ಜೆಎಸ್‌ಡಬ್ಯ್ಲೂ ಶೀಟುಗಳು, ಜಿಐ ಪೈಪುಗಳು (ಖouಟಿಜ, Squಚಿಡಿe) ಅಪೋಲೊ ಪೈಪುಗಳು, ಟಿನ್ ಶೀಟುಗಳು, ಸಿಮೆಂಟ್ ಶೀಟುಗಳು, ಕಬ್ಬಿಣದ ತಗಡುಗಳೂ, ಕಿಟಕಿ ಸರಳುಗಳು, ಬೇಲಿ ತಂತಿಗಳು, ಬೊರ್ ವೆಲ್ ಪೈಪುಗಳು ಸೇರಿದಂತೆ ಎಲ್ಲಾ ತರಹದ ಮೇಷ್‌ಗಳು, ನೀರಿನ ದಂಬೆಗಳು (UPಗಿಅ) ಚಾನೆಲ್‌ಗಳು ಸಂಸ್ಥೆಯಲ್ಲಿ ಚಿಲ್ಲರೆ ಮತ್ತು ರಖಂ ದರದಲ್ಲಿ ಲಭ್ಯವಿದೆ.

ಶ್ರೀ ವಿಘ್ನೇಶ್ವರ ಕ್ರೇನ್ ಸರ್ವೀಸಸ್:
ಮೆಶಿನರಿ ಲೋಡಿಂಗ್ ಮತ್ತು ಆನ್‌ಲೋಡಿಂಗ್, ಎಲೆಕ್ಟ್ರೀಕಲ್ ಲೈನ್ ವರ್ಕ್ಸ್, ಟಿಂಬರ್ ಲೋಡಿಂಗ್ ಮತ್ತು ಅನ್‌ಲೋಡಿಂಗ್, ಬಾವಿಯ ರಿಂಗ್ ಇಳಿಸಲು & ಕೆಸರು ಹೊರ ತೆಗೆಯಲು ಬಕೆಟ್ ಸೌಲಭ್ಯದೊಂದಿಗೆ ಕ್ರೇನ್‌ಗಳು ಬಾಡಿಗೆಗೆ ಲಭ್ಯವಿದೆ‌ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!