May 6, 2026

ಬಾತ್ ರೂಂನಲ್ಲಿ ಮಹಿಳೆಯ ವೀಡಿಯೋ ಚಿತ್ರೀಕರಣ: ಸೆಕ್ಯುರಿಟಿ ಗಾರ್ಡ್ ಬಂಧನ

0
image_editor_output_image2028181391-1713597395920.jpg

ಕಲಬುರಗಿ: ಸೆಕ್ಯುರಿಟಿ ಗಾರ್ಡ್ನಿಂದ ಬಾತ್ ರೂಮ್ನಲ್ಲಿದ್ದ ಮಹಿಳೆಯ ವಿಡಿಯೋ ಮಾಡಿರುವಂತಹ ಘಟನೆ ನಗರದ ರಾಮ ಮಂದಿರ ವೃತ್ತದ ಬಳಿಯಿರುವ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.

ಅಪಾರ್ಟ್ಮೆಂಟ್ನಲ್ಲಿ ಬಾಡಿಗೆಯಿದ್ದ ಮಹಿಳೆಯ ವಿಡಿಯೋವನ್ನು ಸೆಕ್ಯುರಿಟಿ ಗಾರ್ಡ್ ರೆಕಾರ್ಡ್ ವಿಶ್ವನಾಥ್ ಎಂಬಾತ ಮಾಡುತ್ತಿರುವುದನ್ನು ಗಮನಿಸಿದ ಮಹಿಳೆ, ತಕ್ಷಣ ಗಂಡನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಕೂಡಲೇ ಅಪಾರ್ಟ್ಮೆಂಟ್ಗೆ ಆಗಮಿಸಿದ ಮಹಿಳೆಯ ಗಂಡ ಸೆಕ್ಯುರಿಟಿ ಗಾರ್ಡ್ ನನ್ನು ಹಿಡಿದು ಥಳಿಸಿದ್ದಾರೆ.

ಅಪಾರ್ಟ್ಮೆಂಟ್ ಅಂಡರ್ ಗ್ರೌಂಡ್ನಲ್ಲಿರುವ ಕಂಬಕ್ಕೆ ಸೆಕ್ಯುರಿಟಿ ಗಾರ್ಡ್ ವಿಶ್ವನಾಥ್ ನನ್ನು ಕಟ್ಟಿ ಹಾಕಿ ಅಪಾರ್ಟ್ಮೆಂಟ್ನ ನಿವಾಸಿಗಳು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!