ಮಂಗಳೂರು: ದೇವಸ್ಥಾನದಲ್ಲಿ ಮತಯಾಚನೆಗೆ ವಿರೋಧ: ಶಾಸಕ ವೇದವ್ಯಾಸ ಕಾಮತ್, ಮಂದಿರದ ಮೊಕ್ತೇಸರ ನಡುವೆ ಮಾತಿನ ಚಕಮಕಿ
ಮಂಗಳೂರು: ಇಲ್ಲಿನ ಉರ್ವ ಚಿಲಿಂಬಿಯ ಶಿರ್ಡಿ ಸಾಯಿಬಾಬಾ ದೇವಸ್ಥಾನದ ಬಳಿ ಮತ ಯಾಚನೆ ಮಾಡುವ ವಿಚಾರದಲ್ಲಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಮಂದಿರದ ಮೊತ್ತೇಸರ ವಿಶ್ವಾಸ್‌ದಾಸ್ ನಡುವೆ ಗುರುವಾರ ಸಂಜೆ ಮಾತಿನ ಚಕಮಕಿ ನಡೆಯಿತು.
ಬಿಜೆಪಿ ಬೆಂಬಲಿಗರು ಹಾಗೂ ಸಾಯಿ ಮಂದಿರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಪರಸ್ಪರ ತಳ್ಳಾಡಿದರು.
ಸಾಯಿ ಬಾಬಾ ಮಂದಿರದಲ್ಲಿ ರಾಮನಮಮಿ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದವ್ಯಾಸ ಕಾಮತ್ ಅವರು ಪಕ್ಷದ ಕಾರ್ಯಕರ್ತರ ಜೊತೆ ಅಲ್ಲಿಗೆ ಮತ ಯಾಚಿಸಲು ತೆರಳಿದ್ದರು. ಆಗ ವಿಶ್ವಾಸದಾಸ್, ‘ಮಂದಿರದ ಬಳಿ ನೀವು ಮತ ಯಾಚಿಸುವುದು ಬೇಡ. ನಾವೂ ಯಾವ ಪಕ್ಷಕ್ಕೂ ಮತ ಯಾಚಿಸಲು ಅವಕಾಶ ನೀಡಿಲ್ಲ. ನೀವು ಬೇಕಿದ್ದರೆ ಬೇರೆ ಕಡೆ ಮತ ಕೇಳಿ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
‘ಇದು ಸರ್ಕಾರದ ಜಾಗ, ಸಾರ್ವಜನಿಕ ಜಾಗದಲ್ಲಿ ಯಾರು ಬೇಕಾದರೂ ಮತ ಯಾಚಿಸಬಾರದು’ ಎಂದು ಏರಿದ ಧ್ವನಿಯಲ್ಲಿ ಹೇಳಿದ್ದರು.




