March 17, 2026

ಬಿ.ಸಿ ರೋಡ್: ವಾಣಿಜ್ಯ ಕಟ್ಟಡದ ಜಗಳಿಯಲ್ಲಿ ರಕ್ತ ಚೆಲ್ಲಿರುವುದು ಪತ್ತೆ: ಆತಂಕದಲ್ಲಿ ಜನರು

0
IMG-20240418-WA0000.jpg

ಬಂಟ್ವಾಳ: ಬಿ.ಸಿ ರೋಡಿನ ವಾಣಿಜ್ಯ ಮಳಿಗೆಯ ಮುಂಭಾಗವೊಂದರಲ್ಲಿ ರಕ್ತ ಚೆಲ್ಲಿರುವುದು ಕಂಡು ಬಂದಿದ್ದು, ಅಂಗಡಿ ಮಾಲಕರಲ್ಲಿ ಒಂದಷ್ಟು ಗೊಂದಲ ಉಂಟಾದ ಘಟನೆ ನಡೆದಿದೆ.

ಎ.18 ರಂದು ಬೆಳಿಗ್ಗೆ ತಾ.ಪಂ. ನ ವಾಣಿಜ್ಯ ಕಟ್ಟಡವೊಂದರ ಜಗುಲಿಯಲ್ಲಿ ರಕ್ತ ಚೆಲ್ಲಿರುವುದು ಕಂಡು ಬಂದಿದೆ. ಇದನ್ನು ‌ಕಂಡ ಅಂಗಡಿ ಮಾಲಕರು ಹೆದರಿದ್ದು, ಕೂಡಲೇ ಇಲ್ಲೇ ಇರುವ ನಗರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ‌ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಆದರೆ ರಕ್ತ ಚೆಲ್ಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಆಸ್ಪತ್ರೆಯಲ್ಲಿ ಕೂಡ ದಾಖಲಾದ ಬಗ್ಗೆ ಠಾಣೆಗೆ ಮಾಹಿತಿ ಬಂದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದು ಮನುಷ್ಯನ ರಕ್ತವೋ ಅಥವಾ ಇತರ ಪ್ರಾಣಿಗಳ ರಕ್ತವೋ‌ ಎಂಬುದು ಇನ್ನೂ ಕೂಡ ಪತ್ತೆಯಾಗಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!