May 5, 2026

ಬೆಳ್ತಂಗಡಿ: ಮನೆ ಮಾಲಕಿ ಮೇಲೆ ಸಾಕುನಾಯಿ ದಾಳಿ: ಮಹಿಳೆ ಗಂಭೀರ

0
images.jpeg

ಬೆಳ್ತಂಗಡಿ: ಮನೆಯ ಸಾಕು ನಾಯಿ ಮನೆ ಮಾಲಕಿ ಮೇಲೇಯೇ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಇಂದು ಗುರುವಾರ ಅಪರಾಹ್ನ ನಡೆದಿದೆ.

ಮನೆ ಮಾಲಕಿ ನಾಯಿ ಜೊತೆ ಆಡವಾಡುತ್ತಿದ್ದಾಗ ಈ ಘಟನೆ ನಡೆದಿದೆ. ನಾಯಿ ಏಕಾಏಕಿ ದಾಳಿ ಮಾಡಿ ತಲೆ ಭಾಗವನ್ನು ಸೀಳಿ ಹಾಕಿ ಕೈಗೂ ಗಂಭೀರ ಗಾಯಮಾಡಿದೆ. ಗಾಯಗೊಂಡ ಮಹಿಳೆಯನ್ನು ತಕ್ಷಣ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ನಿಡಿಗಲ್ ಓಂಕಾರ್ ನಿವಾಸಿ ದಿ. ರಾಮ್ ದಾಸ್ ಪ್ರಭು ಅವರ ಪತ್ನಿ ಪೂರ್ಣಿಮಾ (49) ಎಂಬವರು ತನ್ನ ಮನೆಯ ಸಾಕು ನಾಯಿಯ ದಾಳಿಯಿಂದ ಗಂಭೀರ ಗಾಯಗೊಂಡ ಮಹಿಳೆಯಾಗಿದ್ದಾರೆ. ಪೂರ್ಣಿಮಾ ತನ್ನ ಮನೆಯಲ್ಲಿ ಸಾಕಿದ್ದ ಸಾಕು ನಾಯಿ ಜೊತೆ ಎಂದಿನಂತೆ ಆಟವಾಡುತ್ತಿದ್ದರು. ಈ ವೇಳೆ ಮಹಿಳೆ ಕಾಲು ಜಾರಿ ನೆಲಕ್ಕೆ ಬಿದ್ದಿದ್ದಾರೆ, ಇದೇ ಸಂದರ್ಭ ನಾಯಿ ಪೂರ್ಣಿಮಾ ಮೇಲೆ ದಾಳಿ ಮಾಡಿ ತಲೆ ಭಾಗವನ್ನು ಸೀಳಿ ಹಾಕಿದ್ದು, ತಲೆಯ ಚಿಪ್ಪು ಎದ್ದು ಬರುವಷ್ಟು ಗಂಭೀರ ಗಾಯಗಳಾಗಿದೆ. ಕೈ ಕಾಲಿಗೂ ಕಚ್ಚಿ ಗಂಭೀರ ಗಾಯಮಾಡಿದೆ. ಮನೆಯವರು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!