May 6, 2026

ಹಾಸನ : ಬೆಂಕಿಗಾಹುತಿಯಾದ ಚಲಿಸುತ್ತಿದ್ದ ಕಾರು , ಇಬ್ಬರು ಪ್ರಯಾಣಿಕರು ಪಾರು..!

0
image_editor_output_image-2145290714-1712927520655

ಹಾಸನ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಹಾಸನ ಹೊರವಲಯದ ಬಿಟ್ಟಗೊಂಡನಹಳ್ಳಿಯಲ್ಲಿ ನಡೆದಿದ್ದು ಕಾರಲ್ಲಿದ್ದ ಇಬ್ಬರು ಪ್ರಯಾಣಿಕರು ಕ್ಷಣಾರ್ಧದಲ್ಲೇ ಕಾರಿನಿಂದಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉದಯಪುರದಿಂದ ಹಾಸನಕ್ಕೆ ಖಾಸಗಿ ಕಂಪನಿಯ ಕಾರಿನಲ್ಲಿ ಬರುತ್ತಿದ್ದಾಗ ಗೊರೂರು ರಸ್ತೆಯ ಬಿಟ್ಟಗೌಡನಹಳ್ಳಿ ಮುಖ್ಯರಸ್ತೆಯಲ್ಲಿ ಕಾರಿನೊಳಗೆ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಪ್ರವೀಣ್ ಮತ್ತು ನಾಗರಾಜು ತಕ್ಷಣ ಡೋರ್ ತೆಗೆದು ಹೊರ ಬಂದಿದ್ದಾರೆ. ಸ್ಥಳೀಯರು ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಮುನ್ನ ಕಾರು ಬಹುತೇಕ ಸುಟ್ಟು ಹೋಗಿತ್ತು. ತಾಂತ್ರಿಕ ದೋಷದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!