ಕಳವು ಆಗಿದ್ದ ಬಿಜೆಪಿ ಅಧ್ಯಕ್ಷ ಜಿಪಿ ನಡ್ಡಾ ಪತ್ನಿ ಕಾರು ಪತ್ತೆ: ಇಬ್ಬರು ಆರೋಪಿಗಳ ಬಂಧನ
ವಾರಾಣಸಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಕಾರನ್ನು ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿನ ಸರ್ವೀಸ್ ಸೆಂಟರ್‌ನಿಂದ ಕಳವು ಮಾಡಲಾಗಿದ್ದ ಕಾರನ್ನು ಪೊಲೀಸರು ವಾರಣಾಸಿಯಲ್ಲಿ ಪತ್ತೆಹಚ್ಚಿದ್ದು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಲ್ಲಿಕಾ ನಡ್ಡಾ ಅವರಿಗೆ ಸೇರಿದ್ದ ಬಿಳಿ ಬಣ್ಣದ ಫಾರ್ಚುನರ್ ಎಸ್‌ಯುವಿ ಕಾರು ಕಳೆದ ಮಾರ್ಚ್ 19 ರಂದು ಕಳ್ಳತನ ಮಾಡಲಾಗಿತ್ತು, ಈ ಕುರಿತು ಕಾರು ಚಾಲಕ ಜೋಗಿಂದರ್ ಸಿಂಗ್ ಅವರು ದೂರು ನೀಡಿದ್ದರು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರಿನ ಪತ್ತೆ ಕಾರ್ಯಚರಣೆ ನಡೆಸಿದ ವೇಳೆ ಕಾರು ವಾರಾಣಸಿಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ವ್ಯಕ್ತಿಗಳನ್ನು ಶಾಹಿದ್ ಮತ್ತು ಶಿವಾಂಗ್ ತ್ರಿಪಾಠಿ ಎಂದು ಗುರುತಿಸಲಾಗಿದ್ದು, ಇವರು ಫರೀದಾಬಾದ್ ಬಳಿಯ ಬಧಕಲ್ ನಿವಾಸಿಗಳು ಎನ್ನಲಾಗಿದೆ. ಇಬ್ಬರು ಆರೋಪಿಗಳು ಕಾರನ್ನು ಕದ್ದು ಬಳಿಕ ಕಾರಿನ ನಂಬರ್ ಪ್ಲೇಟ್ ಬದಲಾಯಿಸಿದ್ದರು ಎಂದು ಹೇಳಲಾಗಿದೆ.






