December 15, 2025

ವಿಟ್ಲ ಜೇಸಿ ಶಾಲೆ: ಚಿಣ್ಣರ ವಿದ್ಯಾಪ್ರವೇಶ ಪ್ರದಾನ ಸಮಾರಂಭ

0
image_editor_output_image-2102415440-1712413504869

ಮಗುವಿನ ಹವ್ಯಾಸ, ಆಸಕ್ತಿಗಳು ಅವರು ಪಡೆಯುವ ಶಿಕ್ಷಣದಷ್ಟೇ ಪ್ರಮುಖವಾದ್ದರಿಂದ ಪೋಷಕರು ಅದಕ್ಕೆ ಪೂರಕ ವಾತಾವರಣ, ಪ್ರೋತ್ಸಾಹ ನೀಡಬೇಕೆಂದು ಜೇಸಿ ಶಾಲಾ ಹಳೆ ವಿದ್ಯಾರ್ಥಿ ಹಾಗೂ ಫ್ರಾನ್ಸ್ ನ ಏರ್ ಬಸ್ ಕಂಪನಿಯ ಸಿಸ್ಟಮ್ ಇಂಜಿನಿಯರ್ ಕಾರ್ತಿಕ್. ಸಿ.ಹೆಚ್ ಅವರು ತನ್ನ ಪತ್ನಿ ಶಾಲಾ ಹಳೆ ವಿದ್ಯಾರ್ಥಿನಿ ಶ್ರೀಮತಿ ಶ್ರೇಯ ಕಾರ್ತಿಕ್ ರೊಂದಿಗೆ,ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಿಶುವಿಹಾರದ ಅಭ್ಯಾಸ ಪೂರೈಸಿದ ವಿದ್ಯಾರ್ಥಿಗಳಿಗೆ “ಕಿಂಡರ್ ಗಾರ್ಟನ್ ಗ್ರಾಜ್ಯುಷನ್-2024″ರ ಶೀರ್ಷಿಕೆಯಡಿ “ವಿದ್ಯಾಪ್ರವೇಶ ಪ್ರಧಾನ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಎಲ್.ಎನ್. ಕೂಡೂರು ರವರು ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಭಿನ್ನವಾದ ಅನುಭವಗಳನ್ನು ಪಡೆಯುವ ಕುತೂಹಲಿ ಗಳಾಗಬೇಕು, ಇದೂ ಮಕ್ಕಳ ಅಭಿವೃದ್ಧಿಯಲ್ಲಿ ಧೈರ್ಯ ತುಂಬುತ್ತವೆ ಎಂದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಹಸನ್ ವಿಟ್ಲ, ಜೆಸಿಐ ವಿಟ್ಲದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಆಡಳಿತಾಧಿಕಾರಿಗಳಾದ ರಾಧಾಕೃಷ್ಣ ಎ, ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು.


ಶಿಶುವಿಹಾರ ಶಿಕ್ಷಣ ಪೂರೈಸಿದ ಒಟ್ಟು 88 ವಿದ್ಯಾರ್ಥಿಗಳಿಗೆ ವಿದ್ಯಾಪ್ರವೇಶ ಪ್ರಧಾನವು ಪ್ರಮಾಣ ಪತ್ರವನ್ನೊಳಗೊಂಡು ಗೌರವಿಸಲ್ಪಟ್ಟಿತ್ತು.ಶಿಶುವಿಹಾರದ ವಿದ್ಯಾರ್ಥಿಗಳಾದ ಓಜಸ್ ಮಧುರಾಮ, ಆರಾಧ್ಯ, ಮೌರ್ಯ ಶೆಟ್ಟಿ ಹಾಗೂ ಶ್ರೀಜ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.


ಪುಟಾಣಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಜಯರಾಮ ರೈ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಹ ಶಿಕ್ಷಕಿ ನಮಿತಾ ವಂದಿಸಿದರು, ಸಹಶಿಕ್ಷಕಿ ಸಲೆಸ್ಟಿನ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!