ಬೈಲ್ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಕೆದಂಬಾಡಿ ವತಿಯಿಂದ ಇಫ್ತಾರ್ ಮತ್ತು ಕಿಟ್ ವಿತರಣೆ
ಬಂಟ್ವಾಳ: ಬೈಲ್ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ -ಕೆದಂಬಾಡಿ
ಇದರ ವತಿಯಿಂದ ದಿನಾಂಕ 05-04-24ರಂದು ರಹ್ಮಾನಿಯಾ ಜುಮ್ಮಾ ಮಸೀದಿಯಲ್ಲಿ ಇಫ್ತಾರ್ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ 21 ಬಡ ಅರ್ಹ ಕುಟುಂಬಗಳಿಗೆ ರಮದಾನ್ ಫಂಡ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಮಾತ್ ಖತೀಬ್ ಥೌಸೀಫ್ ಅಝರಿ ಉಸ್ತಾದ್, ಸ್ಥಳೀಯ ಸದರ್ ಸಮದ್ ಯಮಾನಿ,ಜಮಾತ್ ಪ್ರಧಾನ ಕಾರ್ಯದರ್ಶಿ ರಝಾಕ್ ಕೆದಂಬಾಡಿ ಹಾಗೂ ಜಮಾತ್ ಸದಸ್ಯರೂ,ನಮ್ಮ ಸಂಸ್ಥೆಯ ಸದಸ್ಯರು ಉಪಸ್ಥಿದರಿದ್ದರು
ಕಳೆದ 5 ವರ್ಷ ಮುಂಚೆ ಸ್ಥಾಪನೆಗೊಂಡ ನಮ್ಮ ಸಂಸ್ಥೆಯ ವತಿಯಿಂದ ಹಲವು ಬಡ ರೋಗಿಗಳ, ಬಡ ಹೆಣ್ಣು ಮಗಳ ಮದುವೆ ಸಹಾಯಧನ ,ಎಲ್ಲಾ ವರ್ಷ ರಮಝಾನ್ ಫಂಡ್ ವಿತರಣೆ,ಅರ್ಹ ಕುಟುಂಬಗಳಿಗೆ ಗಾಲಿ ಕುರ್ಚಿ ವಿತರಣೆ ಮುಂತಾದ ಹಲವು ಸಾಮಾಜಿಕ ಕಾರ್ಯಕ್ರಮ ನಡೆಯುತ್ತ ಬಂದಿರುವ ನಮ್ಮ ಸಂಸ್ಥೆಗೆ ಈಗ 5 ರ ಸಂಭ್ರಮವಾಗಿದೆ.






