ಪಿಸ್ತೂಲ್‍ನಿಂದ ಗುಂಡು ಹಾರಿಸಿ ಮನೆ ದರೋಡೆಗೆ ಯತ್ನ: ಇಬ್ಬರು ಆರೋಪಿಗಳ ಬಂಧನ
ತುಮಕೂರು: ನೀರು ಕೇಳುವ ನೆಪದಲ್ಲಿ ಮನೆಗೆ ಬಂದು, ಪಿಸ್ತೂಲ್‍ನಿಂದ ಗುಂಡು ಹಾರಿಸಿ ಮನೆ ದರೋಡೆ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಜಾರ್ಖಂಡ್ ಮೂಲದ ಏಜಾಸ್ ಮಿರ್ದಹ (30), ಸಹಿಬುಲ್ ಅನ್ಸಾರಿ (30) ಎಂದು ಗುರುತಿಸಲಾಗಿದೆ.
ಆರೋಪಿಗಳು ಮಾ.26 ರಂದು ಕುಣಿಗಲ್‍ನ ಉರ್ಕೆಹಳ್ಳಿ ಗ್ರಾಮದ ಗಂಗಣ್ಣ ಎಂಬುವರ ತೋಟದ ಮನೆಗೆ ಕುಡಿಯುವ ನೀರು ಕೇಳಿಕೊಂಡು ಬಂದಿದ್ದರು. ಬಳಿಕ ಮನೆಯಲ್ಲಿದ್ದ ಹಣ ದೋಚಲು ಯತ್ನಿಸಿದ್ದರು. ಈ ವೇಳೆ ದರೋಡೆ ತಡೆಯಲು ತಡೆಯಲು ಯತ್ನಿಸಿದ್ದ ಗಂಗಣ್ಣನ ಕಾಲಿಗೆ ಗುಂಡು ಹಾರಿಸಿದ್ದರು.




