May 6, 2026

3 ಕ್ಷೇತ್ರಗಳಲ್ಲೂ ಗೆದ್ದು ಕಾಂಗ್ರೆಸ್‌ ಅನ್ನು ಮುಗಿಸುತ್ತೇವೆ: ಎಚ್‌.ಡಿ.ದೇವೇಗೌಡ ಶಪಥ

0
image_editor_output_image-845621476-1712274643534.jpg

ಹಾಸನ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದೆ. ರಾಜ್ಯದಲ್ಲಿ ಕೇವಲ 3 ಕ್ಷೇತ್ರಗಳಲ್ಲಿ ಮಾತ್ರ ನಾವು ಸ್ಪರ್ಧಿಸಿದ್ದೇವೆ. ಈ ರಾಷ್ಟ್ರದಲ್ಲಿ ಪ್ರಧಾನಿಯಾಗಿ ಅಧಿಕಾರ ನಡೆಸಿದ ಈ ದೇವೇಗೌಡ ಇಲ್ಲೇ ಇದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್‌ ಮುಗಿಸಲೆಂದೇ ನಾವು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಿರುವ 3 ಕ್ಷೇತ್ರಗಳಲ್ಲೂ ಗೆದ್ದು ಕಾಂಗ್ರೆಸ್‌ ಅನ್ನು ಮುಗಿಸುತ್ತೇವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಶಪಥ ಮಾಡಿದರು.

ಹೇಮಾವತಿ ಪ್ರತಿಮೆ ಬಳಿ ರ್ಯಾಲಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಅನ್ನು ನಾಶ ಮಾಡಿದಾಗ ನಮಗೆ ನೆಮ್ಮದಿ ಎಂದು ಒಬ್ಬರು ಹೇಳುತ್ತಿದ್ದಾರೆ. ಮತ್ತೂಬ್ಬರು ರಾಜ್ಯದಲ್ಲಿ ಜೆಡಿಎಸ್‌ ಎಲ್ಲಿದೆ ಎಂದು ಕೇಳಿದ್ದಾರೆ. ಈ ಪಕ್ಷದ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಸಿಎಂ, ಡಿಸಿಎಂಗೆ ತಿರುಗೇಟು ನೀಡಿದರು.

Leave a Reply

Your email address will not be published. Required fields are marked *

error: Content is protected !!