ನಿರೀಕ್ಷಿತ ಸಮಯಕ್ಕೆ ತಂಗಿಯ ಮದುವೆಗೆ ಸಿಗದ ಸಾಲ:
ಚಿನ್ನಾಭರಣ ಅಂಗಡಿಯಲ್ಲಿ ತಾಯಿ, ತಂಗಿಯನ್ನು ಬಿಟ್ಟು ಮನೆಗೆ ಬಂದು ಯುವಕ ಆತ್ಮಹತ್ಯೆ
ತ್ರಿಶೂರ್: ತಂಗಿಯ ಮದುವೆಗೆ ಇನ್ನು ಐದು ದಿನ ಬಾಕಿ ಇರುವಾಗ ಆಕೆಯ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತ್ರಿಶೂರ್‌ನ ಗಾಂಧಿನಗರದ ಕುಂದುವಾರ ಪಚ್ಚಳಪ್ಪೂಟ್ ನಿವಾಸಿ ವಿಪಿನ್ (25) ಎಂಬಾತ ಮದುವೆಗೆ ಆಶಿಸಿದ ಸಾಲ ಕೈಸೇರಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮದುವೆಗೆ ಚಿನ್ನಾಭರಣ ಖರೀದಿಸಲು ತಾಯಿ ಹಾಗೂ ಸಹೋದರಿಯನ್ನು ಆಭರಣ ಅಂಗಡಿಯಲ್ಲಿ ಬಿಟ್ಟು ಮನೆಗೆ ತೆರಳಿದ ವಿಪಿನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂಗಿಯ ಮದುವೆಗೆ ಬ್ಯಾಂಕ್ ನಲ್ಲಿ ಸಾಲ ಕೇಳಿದ್ದರು. ಕೇವಲ ಮೂರು ಸೆಂಟ್ಸ್ ಜಮೀನು ಇದ್ದ ಕಾರಣ ಎಲ್ಲಿಂದ ಸಾಲ ಸಿಗಲಿಲ್ಲ. ನಂತರ ಒಂದು ಬ್ಯಾಂಕ್‌ನಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ನಿನ್ನೆಯ ದಿವಸ ಸಾಲದ ಘೋಷಣೆಯಾದ ಹಿನ್ನೆಲೆಯಲ್ಲಿ ಮದುವೆಗೆ ಚಿನ್ನ ಖರೀದಿಸಲು ತಾಯಿ ಹಾಗೂ ಸಹೋದರಿಯೊಂದಿಗೆ ಆಭರಣ ಮಳಿಗೆಗೆ ತೆರಳಿದ್ದರು. ಚಿನ್ನಾಭರಣಗಳನ್ನು ತೆಗೆದುಕೊಂಡ ನಂತರ ವಿಪಿನ್ ಬ್ಯಾಂಕ್ ನಿಂದ ಹಣದೊಂದಿಗೆ ಈಗಲೇ ಬರುವುದಾಗಿ ಹೇಳಿ ಅಲ್ಲಿಂದ ತೆರಳಿದ್ದಾನೆ. ಆದರೆ, ಬ್ಯಾಂಕ್ ನಿಂದ ಸಾಲ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಜ್ಯುವೆಲ್ಲರಿ ಅಂಗಡಿಯಲ್ಲಿ ಬಹಳ ಹೊತ್ತು ಕಾದು ತಾಯಿ ಬೇಬಿ ಹಾಗೂ ಸಹೋದರಿ ವಿದ್ಯಾ ಮನೆಗೆ ಬಂದಾಗ ವಿಪಿನ್ ಶವವಾಗಿ ಪತ್ತೆಯಾಗಿದ್ದಾರೆ.
ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದ ವಿಪಿನ್ ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದರು. ಮರದ ಕೆಲಸ ಮಾಡುತ್ತಿದ್ದ ತಂದೆ ವಾಸು ಐದು ವರ್ಷಗಳ ಹಿಂದೆ ತೀರಿಕೊಂಡರು. ವಿಪಿನ್ ನ ತಂಗಿಗೆ ಸ್ವಲ್ಪ ಸಮಯದ ಹಿಂದೆ ಮದುವೆ ನಿಶ್ಚಯವಾಗಿತ್ತು. ಆರ್ಥಿಕ ಬಿಕ್ಕಟ್ಟಿನಿಂದಾಗಿ ಮದುವೆ ಮುಂದೂಡಲಾಗಿತ್ತು.





