ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸಿದ ಯುವಕ

ಬೆಂಗಳೂರು: ವಿಶೇಷ ಚೇತನ ಯುವತಿಗೆ ಯುವಕ ನೊಬ್ಬ ಮದುವೆಯಾಗುವುದಾಗಿ ನಂಬಿಸಿ, ಆಕೆ ಜತೆ ದೈಹಿಕ ಸಂಪರ್ಕ ಬೆಳೆಸಿದಲ್ಲದೇ, ಲಕ್ಷಾಂತರ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಂಜಯನಗರ ನಿವಾಸಿ ಯುವತಿ(28) ನೀಡಿದ ದೂರಿನ ಮೇರೆಗೆ ಸುರೇಂದ್ರ ಮೂರ್ತಿ(35) ಎಂಬಾತನ ವಿರುದ್ಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ, ಘಟನೆ ಕೊಡಿಗೇಹಳ್ಳಿ ಯಲ್ಲಿ ನಡೆದಿದ್ದರಿಂದ ಪ್ರಕರಣವನ್ನು ಕೊಡಿಗೇಹಳ್ಳಿ ಠಾಣೆಗೆ ವರ್ಗಾಯಿಸಲಾಗಿದೆ. ಸದ್ಯ ಆರೋಪಿ ತಲೆಮರೆ ಸಿಕೊಂಡಿದ್ದಾನೆ. ಶೋಧಕಾರ್ಯ ಮುಂದುವರಿದಿದೆ.