ಕಾರ್ಕಳ: ಟೂರಿಸ್ಟ್ ಬಸ್ ಪಲ್ಟಿ

ಕಾರ್ಕಳ: ಟೂರಿಸ್ಟ್ ಬಸ್ ಪಲ್ಟಿಯಾಗಿ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ಮಾ. 27ರಂದು ಕುಕ್ಕುಂದೂರಿನಲ್ಲಿ ಸಂಭವಿಸಿದೆ.
ಮಂಡ್ಯದಿಂದ ಉಡುಪಿ ಕಡೆಗೆ ಸಾಗುತ್ತಿದ್ದ KA51C7246 ನೋಂದಾಯಿತ ಟೂರಿಸ್ಟ್ ಬಸ್ ಕುಕ್ಕುಂದೂರು ಮಸೀದಿ ಬಳಿ ಪಲ್ಟಿಯಾಗಿದೆ.
ಪರಿಣಾಮವಾಗಿ ಬಸ್‌ನೊಳಗಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ದ್ವಿಚಕ್ರ ವಾಹನವೊಂದು ಅಡ್ಡಬಂದ ಕಾರಣದಿಂದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗುತ್ತಿದೆ