ಬ್ಲಾಗರ್ ನತಾಶಾ ಮೃತ್ಯು
ಪುಣೆ: ಜನಪ್ರಿಯ ಆಹಾರ ಬ್ಲಾಗರ್ ನತಾಶಾ ದೀದಿ (50) ಅಲ್ಪಕಾಲದ ಅಸೌಖ್ಯದಿಂದ ಮುಣೆಯಲ್ಲಿ ನಿಧನರಾಗಿದ್ದಾರೆ. ಬಾಣಸಿಗರಾಗಿದ್ದ ನತಾಶಾ ಸಾವಿನ ಸುದ್ದಿಯನ್ನು ಅವರ ಪತಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.
ನನ್ನ ಪತ್ನಿ ನತಾಶಾ ದೀದಿ ಅವರ ನಿಧನವನ್ನು ಘೋಷಿಸಲು ದುಃಖವಾಗುತ್ತಿದೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ‘ದಿ ಗಟ್‌ಲೆಸ್ ಫುಡೀ’ ಎಂಬ ಇನ್‌ಸ್ಟಾಗ್ರಾಮ್ ಖಾತೆಯನ್ನು ಸಕ್ರಿಯವಾಗಿರಿಸಿಕೊಳ್ಳುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ. ನತಾಶಾ ಅವರ ಪೋಸ್ಟ್‌ಗಳು ಮತ್ತು ಕಥೆಗಳು ಅನೇಕ ಜನರಿಗೆ ಸ್ಫೂರ್ತಿ ನೀಡುತ್ತವೆ. ಆಕೆಯ ಅನೇಕ ಅನುಯಾಯಿಗಳು ಆಕೆಯ ಪಾಕವಿಧಾನಗಳನ್ನು ಎದುರು ನೋಡುತ್ತಿದ್ದಾರೆ.
ನತಾಶಾ ಅವರ ಪತಿ, “ಹಲವಾರು ವೀಡಿಯೊಗಳು ಅನೇಕ ಜನರಿಗೆ ಸ್ಫೂರ್ತಿ ನೀಡಿವೆ ಎಂದು ನನಗೆ ತಿಳಿದಿದೆ” ಎಂದು ಹೇಳಿದ್ದಾರೆ. ನತಾಶಾ ಸಾವಿನ ಕಾರಣ ಇನ್ನೂ ಬಹಿರಂಗಗೊಂಡಿಲ್ಲ.





