ಟಿಕೆಟ್ ವಿಚಾರದಲ್ಲಿ ಜಗಳ: ಮಹಿಳೆಗೆ ಹಲ್ಲೆ ಮಾಡಿರುವ ಕಂಡಕ್ಟರ್ ಬಂಧನ
ಬೆಂಗಳೂರು: ಟಿಕೆಟ್ ವಿಚಾರಕ್ಕೆ ನಡೆದ ಜಗಳದಲ್ಲಿ ಬಿಎಂಟಿಸಿ ಕಂಡಕ್ಟರ್ ಮಹಿಳೆ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಸಿದ್ದಾಪುರ ಠಾಣಾ ವ್ಯಾಪ್ತಿಯ ಡೈರಿ ಸರ್ಕಲ್ ಬಳಿ ನಡೆದಿದೆ.
ತನ್ಜುಲಾ (24) ಹಲ್ಲೆಗೊಳಗಾದ ಯುವತಿ. ಹೊನ್ನಪ್ಪ ಹಲ್ಲೆ ಮಾಡಿರುವ ಆರೋಪಿ. ಯುವತಿಯ ಮೇಲೆ ಹಲ್ಲೆ ಮಾಡಿರುವ ಆರೋಪಿ ಕಂಡಕ್ಟರ್ ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354, 323, 506 ಹಾಗೂ 509 ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.





