ಆಟವಾಡುತ್ತಿದ್ದಾಗ ಚಿಕ್ಕ ಚೆಂಡು ನುಂಗಿ ಬಾಲಕ ಮೃತ್ಯು
ವಯನಾಡು: ಚಿಕ್ಕ ಚೆಂಡೊಂದು ಗಂಟಲಲ್ಲಿ ಸಿಕ್ಕಿ ಉಸಿರುಗಟ್ಟಿ ಎರಡೂವರೆ ವರ್ಷದ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ಕೇರಳದ ವಯನಾಡಿನಲ್ಲಿನಡೆದಿದೆ.
ಇಲ್ಲಿನ ವೈಪಾಡಿ ಮೂಲದ ಮಹಮ್ಮದ್ ಜಲೀಲ್ ಮತ್ತು ರಬೀನಾ ದಂಪತಿಗಳ ಪುತ್ರ ಮಹಮ್ಮದ್ ಅಬೂಬಕ್ಕರ್ ಮೃತ ಬಾಲಕನಾಗಿದ್ದಾನೆ. ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಆಟವಾಡುತ್ತಿದ್ದಾಗ ಮಗು ಆಕಸ್ಮಿಕವಾಗಿ ಚೆಂಡನ್ನು ನುಂಗಿದೆ. ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಮೆಪ್ಪಾಡಿಯ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೂ ಸೋಮವಾರ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ.




