ಸುರತ್ಕಲ್: ಸ್ಕೂಟರ್ ಗೆ ಜೀಪು ಢಿಕ್ಕಿ: ಸವಾರರಿಬ್ಬರು ಮೃತ್ಯು
ಸುರತ್ಕಲ್: ಜೀಪೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಗಾಯಾಳು ದ್ವಿಚಕ್ರ ಸವಾರರು ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಸೂರಜ್ ಇಂಟರ್ ರ್ನ್ಯಾಷನಲ್ ಬಳಿ ಸೋಮವಾರ ಮಧ್ಯಾಹ್ನ ವರದಿಯಾಗಿದೆ.
ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ನೋನಯ್ಯ ಬಂಗೇರ ವಿದ್ಯಾನಗರ ಕುಳಾಯಿ ಮತ್ತು ಸುರತ್ಕಲ್ ಕಾನ ನಿವಾಸಿ ನಿಯಾಝ್ (47) ಮೃತಪಟ್ಟವರು.
ಇಬ್ಬರೂ ಬೀಡಿ ಕಾಂಟ್ರಾಕ್ಟರ್‌ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿದ್ದ ಜೀಪ್ ಸೂರಜ್ ಇಂಟರ್ ನ್ಯಾಶನಲ್ ಬಳಿ ದ್ವಿಚಕ್ರ ವಾಹನದಲ್ಲಿದ್ದ ನೋನಯ್ಯ ಮತ್ತು ನಿಯಾಝ್ ಅವರಿಗೆ ಢಿಕ್ಕಿ ಹೊಡೆದಿದೆ.
ಮಂಗಳೂರು ಉತ್ತರ ಸಂಚಾರ ಪೊಲೀಸರು ಪ್ರಕರಣ ದಾಖಲಾಗಿದೆ.





