December 19, 2025

ಕಡಬ: ಭಾರೀ ಗಾಳಿ ಮಳೆ, ಮನೆಯ ಮೇಲೆ ಬಿದ್ದ ಮರ

0
image_editor_output_image1422197409-1711237558555.jpg

ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಭಾರಿ ಗಾಳಿ ಮಳೆ ಸುರಿದಿದ್ದು ಗಾಳಿಗೆ ಮರವೊಂದು ಮನೆಯ ಮೇಲೆ ಬಿದ್ದು ಹಾನಿಯಾಗಿದ್ದರೆ ಮನೆಯಲ್ಲಿದ್ದದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದಲ್ಲಿ ಈ ದುರ್ಘಟನೆಸಂಭವಿಸಿದ್ದು ಬಾಬು ಮತ್ತು ಲಕ್ಷ್ಮೀ ಅವರ ಮನೆ ಮರ ಬಿದ್ದ ಪರಿಣಾಮ ಹಾನಿಯಾಗಿದೆ. ಮನೆಯ ಶೌಚಾಲಯ , ನೀರಿನ ಟ್ಯಾಂಕಿ ಕೂಡ ಸಂಪೂರ್ಣ ನಾಶವಾಗಿದೆ. ಸ್ಥಳಕ್ಕೆಕಡಬ ತಹಶೀಲ್ದಾರ್ ಪ್ರಭಾಕರ್ ಖಜೂರೆ, ಅರಣ್ಯ ಇಲಾಖಾ ಸಿಬಂದಿ, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಕ್ಕದ ಒಂದೆರಡು ಮನೆಗಳಿಗೂ ಹಾನಿ ಸಂಭವಿಸಿದೆ. ಕಡಬ ತಾಲೂಕಿನಾದ್ಯಂತ ವಿದ್ಯುತ್ಸರಬರಾಜು ಸ್ಥಗಿತಗೊಂಡಿದೆ.

Leave a Reply

Your email address will not be published. Required fields are marked *

You may have missed

error: Content is protected !!