December 19, 2025

ನಳಿನ್ ಕುಮಾರ್ ಕಟೀಲ್ ನೆಮ್ಮದಿಯಿಂದ ಇರಬೇಕಾದರೆ ಕಾಂಗ್ರೆಸ್‌ಗೆ ಬನ್ನಿ: ಯು.ಟಿ ಖಾದರ್

0
u-t-abdul-khadar-ali-fareed-5495.jpg

ಮಂಗಳೂರು: ನಳಿನ್ ಕುಮಾರ್ ಕಟೀಲ್ ಅವರಿಗೆ ನೆಮ್ಮಂದಿಯಿಂದ ಇರಬೇಕಾದರೆ ನೀವೇ ಕಾಂಗ್ರೆಸ್‌ಗೆ ಬನ್ನಿ ಎಂದು ಯು.ಟಿ ಖಾದರ್ ವ್ಯಂಗ್ಯವಾಡಿದ್ದಾರೆ.

ಯುಟಿ ಖಾದರ್, ರೈ ಬಿಟ್ಟು ಉಳಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಬರಲಿ ಎಂಬ ನಳಿನ್ ಹೇಳಿಕೆಗೆ ತಿರುಗೇಟು ನೀಡಿರುವ ಖಾದರ್, “ನಳೀನ್ ಕುಮಾರ್ ಕಟೀಲ್ ಈ ಹಿಂದೆ ಕಾಂಗ್ರೆಸ್‌ನಲ್ಲಿ ವಿನಯ್ ಕುಮಾರ್ ಸೋರಕೆ ಅವರೊಂದಿಗೆ ಸಕ್ರಿಯವಾಗಿ ದುಡಿದವರು. ಹಾಗಾಗಿ ಅವರಿಗೆ ಹಿಂದಿನ ಎಲ್ಲಾ ನೆನಪುಗಳು ಬಂದಿರಬಹುದು. ನಿಮಗೆ ನಮ್ಮಂದಿಯಿಂದ ಇರಬೇಕಾದ್ರೆ ನೀವೇ ಕಾಂಗ್ರೆಸ್‌ಗೆ ಬನ್ನಿ” ಎಂದಿದ್ದಾರೆ.

ಇನ್ನು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಅಲ್ಲಿ ಇರಬೇಕು ಎಂಬ ಆಸೆ ನಳೀನ್ ಅವರಿಗೆ. ಅದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಬರಲಿ ಎಂದಿದ್ದಾರೆ. ಆದರೆ ಇಷ್ಟು ಕಾರ್ಯಕರ್ತರು ಬಿಜೆಪಿ ಸೆರೋದು ಕಷ್ಟ. ಅದರ ಬದಲು ನಳೀನ್ ಕುಮಾರ್ ಅವರೇ ಕಾಂಗ್ರೆಸ್ ಮತ್ತೆ ಬರಲಿ” ಎಂದು ವ್ಯಂಗ್ಯವಾಡಿದ್ದಾರೆ.
ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, “ಶಿವಮೊಗ್ಗದಲ್ಲಿ ಗೋ ವಿಚಾರದಲ್ಲಿ ನಡೆದಾಗ ತಡೆಗೆ ಪ್ರಯತ್ನ ಮಾಡಬಹುದಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಗೋಕಳ್ಳತನ ಹೆಚ್ಚಾಗಿದೆ, ಹಾಗಾದರೆ ಗೋಹತ್ಯೆ ನಿಷೇಧ ಕಾನೂನು ತಂದ ಉದ್ದೇಶ ಏನು? ಎಂದು ಪ್ರಶ್ನಿಸಿರುವ ಅವರು, ಗೃಹಮಂತ್ರಿ ಪೊಲೀಸರನ್ನು ಬೈಯುತ್ತಿದ್ದಾರೆ.ರಾಜ್ಯದಲ್ಲಿರುವ ಗೋಮಾಂಸ ರಫ್ತಿನ 14 ಕಂಪೆನು ಮೊದಲು ಬಂದ್ ಮಾಡಲಿ. ಕರ್ನಾಟಕದಿಂದ ಗೋವಾಕ್ಕೆ ಗೋಮಾಂಸ ಹೇಗೆ ಹೋಗುತ್ತದೆ? ನಿಮ್ದೇನು ನಾಟಕವಾ? ” ಎಂದು ಪ್ರಶ್ನಿಸಿದ್ದಾರೆ.

ಇನ್ನು ಶೇ.90 ಜನ ಕೊರೊನಾದಿಂದ ನರಳಿದ್ದಾರೆ, ಆದರೆ ಕೆಲವು ಮಂದಿ ಸ್ವಪ್ರತಿಷ್ಠೆಗಾಗಿ ದ್ವೇಷ ಭಾಷಣ, ಇವರೇ ಜಿಲ್ಲೆಗೆ ದೊಡ್ಡ ಸಮಸ್ಯೆ ಸರಕಾರ, ಪೊಲೀಸ್ ಇಲಾಖೆ ಕಠಿಣವಾದ ಕ್ರಮ ಕೈಗೊಳ್ಳಲಿ.ಸುರತ್ಕಲ್ ತೋಲ್ ಗೇಟ್ ಸಮಾಜದ್ರೋಹಿ ಶಕ್ತಿಗಳು ವಿದ್ಯಾರ್ಥಿಗಳಿಗೆ ಹೊಡೆದಾಗ ಶಾಸಕ ಬಿಡಿಸಿ ತಂದಿದ್ದೇ ಪ್ರೇರಣೆ ನೀಡಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!