ಪಿಸ್ತೂಲು ಪರಿಶೀಲನೆ ವೇಳೆ ಮಿಸ್ ಫೈರ್: ಪೊಲೀಸ್ ಕಾನ್ ಸ್ಟೇಬಲ್ ಗೆ ಗುಂಡೇಟು
ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆ ಪೊಲೀಸ್ ಠಾಣೆಗೆ ಪಿಸ್ತೂಲ್ ಜಮೆ ಮಾಡಿದರು. ಆದರೆ ಪಿಸ್ತೂಲ್ ಠಾಣೆಗೆ ತಂದು ಕೊಟ್ಟ ವ್ಯಕ್ತಿ ಮಾಡಿದ ಎಡವಟ್ಟಿನಿಂದ ಠಾಣೆಯಲ್ಲೇ ದುರ್ಘಟನೆಯೊಂದು ನಡೆದು ಹೋಗಿದೆ.
ಬೊಮ್ಮನಹಳ್ಳಿ ವ್ಯಾಪ್ತಿಯ ಬೇಗೂರು ಪೊಲೀಸ್ ಠಾಣೆಗೆ ಮುಕುಂದ ರೆಡ್ಡಿ ಎಂಬವರು ಪಿಸ್ತೂಲ್ ತಂದು ಜಮಾ ಮಾಡಿದರು. ಪೊಲೀಸ್ ಕಾನ್ಸ್ ಟೇಬಲ್ ಪಿಸ್ತೂಲು ಪರಿಶೀಲನೆ ವೇಳೆ ಟ್ರಿಗರ್ ಒತ್ತಿದ್ದಾರೆ.
ಈ ವೇಳೆ ಏಕಾಏಕಿ ಮಿಸ್ ಫೈರ್ ಆಗಿ, ಮತ್ತೊಬ್ಬ ಪೊಲೀಸ್ ಪೇದೆ ಅಂಬುದಾಸ್ ಕಾಲಿಗೆ ಗುಂಡೇಟು ತಗುಲಿದೆ. ಗಾಯಾಳುವನ್ನು ಅಪೊಲೋ ಆಸ್ಪತ್ರೆಗೆ ದಾಖಸಲಾಗಿದೆ.





