ಸೋನು ಗೌಡ ಬಂಧನ
ಬೆಂಗಳೂರು : ಸಾಮಾಜಿಕ ಜಾಲತಾಣಗಳ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಸೋನು ಶ್ರೀನಿವಾಸ್ ಗೌಡ, ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ ಮೂಲಕ ಮತ್ತಷ್ಟು ಫೇಮಸ್ ಆಗಿದ್ದರು. ಸದಾ ಒಂದಿಲ್ಲೊಂದು ವೀಡಿಯೋ ಹಾಕಿ ಸೋನು ಶ್ರೀನಿವಾಸ್ ಗೌಡ ಲೈಕ್ಸ್ ಗಿಟ್ಟಿಸಿಕೊಳ್ಳುತ್ತಿದ್ದರು. ಇದೀಗ ಅವರು ಅರೆಸ್ಟ್ ಆಗಿದ್ದಾರೆ.
ಸೋನು ಗೌಡ ‘ಸೇವಂತಿ’ ಎನ್ನುವ 8 ವರ್ಷದ ಬಡ ಬಾಲಕಿಯನ್ನು ದತ್ತು ತೆಗೆದುಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಅವರೇ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದುವೇ ಈಗ ಅವರಿಗೆ ಸಂಕಷ್ಟಕ್ಕೊಡ್ಡಿದೆ.





