September 19, 2024

ಬಂಟ್ವಾಳ: ನೇತ್ರಾವತಿ ನದಿಗೆ ಬಿದ್ದು ಯುವಕ ಸಾವು ಪ್ರಕರಣ: ಕೊಲೆ ಶಂಕೆ, ಪೊಲೀಸ್ ದೂರಿನ ಆಧಾರದಲ್ಲಿ ತನಿಖೆ ಆರಂಭ

0

ಬಂಟ್ವಾಳ: ಶಂಭೂರು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಮಾ. 18 ಸಂಜೆ ನೇತ್ರಾವತಿ ನದಿ ನೀರಿಗೆ ಬಿದ್ದು ಬೆಳ್ತಂಗಡಿ ಮೂಲದ ಯುವಕನೋರ್ವ ಮೃತಪಟ್ಟಿರುವ ಕುರಿತು ಹಲವು ಸಂಶಯಗಳು ಹುಟ್ಟಿಕೊಂಡಿದ್ದು, ಮೃತರ ಸಂಬಂಧಿಕರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಡ ಗ್ರಾಮದ ಮಂಜೊಟ್ಟಿ ನಿವಾಸಿ ಲೋಹಿತಾಶ್ವ(30) ಅವರು ಕಾರಿನಲ್ಲಿ ನಾಲ್ವರು ಸ್ನೇಹಿತರ ಜತೆ ಶಂಭೂರಿನ ನೇತ್ರಾವತಿ ನದಿ ತೀರಕ್ಕೆ ಆಗಮಿಸಿದ್ದರು. ಈ ವೇಳೆ ಲೋಹಿತಾಶ್ವ ಅವರ ಮೃತದೇಹ ನೀರಿನಲ್ಲಿ ಪತ್ತೆಯಾಗಿದೆ.

ಅದರ ದೇಹದಲ್ಲಿ ಬಟ್ಟೆ, ಕೈಯಲ್ಲಿ ವಾಚ್ ಇದ್ದ ಕಾರಣ ಅವರು ಸ್ನಾನಕ್ಕೆಂದು ನದಿಗೆ ಇಳಿದಿರಲಿಲ್ಲ. ಹಾಗಾದರೆ ಅವರು ಯಾವ ರೀತಿ ಮೃತಪಟ್ಟಿದ್ದಾರೆ ಎಂಬ ಸಂಶಯಗಳು ಹುಟ್ಟಿಕೊಂಡಿತ್ತು. ಘಟನೆಯ ಕುರಿತು ಲೋಹಿತಾಶ್ವ ಅವರ ಪತ್ನಿಯ ತಮ್ಮ ಕಳಿಯ ಗ್ರಾಮ ನಿವಾಸಿ ಸಂದೀಪ್ ಪೊಲೀಸರಿಗೆ ದೂರು ನೀಡಿದ್ದು, ಭಾವನ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಸಾವಿನ ನೈಜ ಕಾರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

ಮಾ.20 ರಂದು‌ ಮಂಗಳವಾರ ಮೃತದೇಹವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಳಿಕ ಸ್ಪಷ್ಟವಾದ ಕಾರಣ ತಿಳಿದುಬರಬಹುದು.

ಇಲ್ಲಿಗೆ ಯಾಕೆ ಬಂದಿದ್ದರು:
ಸ್ನೇಹಿತರು ಜೊತೆಯಾಗಿ ಸ್ನಾನ ಮಾಡುವ ಉದ್ದೇಶದಿಂದ ಬೆಳ್ತಂಗಡಿ ತಾಲೂಕಿನಿಂದ ಬಂಟ್ವಾಳ ತಾಲೂಕಿಗೆ ಯಾಕೆ ಬಂದಿದ್ದಾರೆ. ಮತ್ತು ಶಂಭೂರು ಗ್ರಾಮಕ್ಕೆ ಯಾಕೆ ತೆರಳಿದ್ದರು ಎಂಬ ಅನೇಕ ಸಂಶಯವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಎಲ್ಲಾ ಸಂಶಯಗಳಿಗೆ ಉತ್ತರ ಪೋಲೀಸ್ ತನಿಖೆಯ ಬಳಿಕ ತಿಳಿಯಬೇಕಾಗಿದೆ. ಆದರೆ ಪೋಲೀಸ್ ಇಲಾಖೆ ಸರಿಯಾದ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!