December 19, 2025

ಬಂಟ್ವಾಳ: ದ್ವಿಚಕ್ರ ವಾಹನ ಕಳವು‌

0
image_editor_output_image2105043769-1710892602800.jpg

ಬಂಟ್ವಾಳ: ದ್ವಿಚಕ್ರ ವಾಹನವನ್ನು ನಿಲ್ಲಿಸಿದ ಸ್ಥಳದಿಂದ ಕಳವು‌ ಮಾಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣದ ಪಿರ್ಯಾದಿದಾರರಾದ ನರಿಕೊಂಬು ಗ್ರಾಮ ಬಂಟ್ವಾಳ‌ ರಮೇಶ್ ಎಂಬವರ ದೂರಿನಂತೆ, ಫಿರ್ಯಾದಿದಾರರು ತನ್ನ ಬಾಬ್ತು ದ್ವಿಚಕ್ರ ವಾಹನ ನಂಬ್ರ: KA 19 EV 0620 ನೇ HONDA ACTIVA ದ್ವಿಚಕ್ರ ವಾಹನವನ್ನು, ದಿನಾಂಕ: 18-03-2024 ರಂದು ಮದ್ಯಾಹ್ನ, ಬಂಟ್ವಾಳ ಕಾರ್ತಿಕ್ ವೈನ್ಸ್ ಶಾಫ್ ಹಿಂಬದಿಯಲ್ಲಿ ನಿಲ್ಲಿಸಿ ಹೋಗಲಾಗಿದೆ.

ಹಿಂತಿರುಗಿ ಸಂಜೆ ಬಂದು ದ್ವಿಚಕ್ರ ವಾಹನವನ್ನು ನಿಲ್ಲಿಸಿದ ಸ್ಥಳದಲ್ಲಿ ನೋಡುವಾಗ ವಾಹನವು ಕಾಣಿಸದೇ ಇದ್ದು, ಯಾರೋ ಕಳ್ಳರು ಅಂದಾಜು ರೂ. 30,000/- ಮೌಲ್ಯದ ಸದ್ರಿ ದ್ವಿಚಕ್ರ ವಾಹನವನ್ಬು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ, ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 60/2024 ಕಲಂ: 379 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!