September 25, 2026

ಉಜ್ಬೇಕಿಸ್ತಾನದ ಮಹಿಳೆ ಕೊಲೆ ಪ್ರಕರಣ: 24 ಗಂಟೆಯಲ್ಲಿ ಇಬ್ಬರು ಆರೋಪಿಗಳ ಬಂಧನ

0
image_editor_output_image2022028164-1710632302096.jpg

ಬೆಂಗಳೂರು: ರಾಜಧಾನಿಯಲ್ಲಿ ಉಜ್ಬೇಕಿಸ್ತಾನದ ಮಹಿಳೆ ಅನುಮಾನಾಸ್ಪದ ಸಾವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಇದು ಕೊಲೆ ಎಂಬುದು ತನಿಖೆಯಿಂದ ಪೊಲೀಸರಿಗೆ ತಿಳಿದುಬಂದಿದ್ದು, 24 ಗಂಟೆಯಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.

ಅಸ್ಸಾಂನ ಅಮೃತ್ ಹಾಗೂ ರಾಬರ್ಟ್ ಬಂಧಿತರು. ಇವರು ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದರು. ಬಿಡಿಎ ಸಮೀಪದ ಹೋಟೆಲ್‌ನ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ವಿದೇಶಿ ಮಹಿಳೆ ಜರೀನಾ ಬಳಿ ತುಂಬಾ ಹಣವಿದೆ ಎಂದು ಹಣದಾಸೆಗೆ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಶೇಷಾದ್ರಿಪುರಂನ ಜಗದೀಶ್ ಹೋಟೆಲ್‌ನಲ್ಲಿ ಉಜ್ಬೇಕಿಸ್ತಾನದ ಮಹಿಳೆ ಸಾವನ್ನಪ್ಪಿದ್ದರು. ವಿಚಾರ ತಿಳಿದು ಸ್ಥಳಕ್ಕೆ ಹೋದ ಪೊಲೀಸರು ರಾಯಭಾರ ಕಚೇರಿಯಿಂದ ಅನುಮತಿ ಪಡೆದು ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ.

ಇದು ಅನುಮಾನಾಸ್ಪದ ಸಾವಲ್ಲ, ಕೊಲೆ ಅನ್ನೋದು ಬೆಳಕಿಗೆ ಬಂದಿದೆ. ಈ ಮಹಿಳೆ ಕಳೆದ ಕೆಲ ವರ್ಷಗಳಿಂದ ಭಾರತ ಪ್ರವಾಸ ಮಾಡ್ತಿದ್ದು, 50 ಕ್ಕೂ ಹೆಚ್ಚು ಬಾರಿ ಭಾರತಕ್ಕೆ ಬಂದಿದ್ದರು. ಆದರೆ ಬೆಂಗಳೂರಿನಲ್ಲಿ ಕೊಲೆಯಾಗಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!