ನಳಿನ್ ಕುಮಾರ್ ಕಟೀಲ್ ಅನ್‌ಫಿಟ್ ಸಂಸದ, ಇದಕ್ಕಾಗಿಯೇ ಟಿಕೆಟ್ ಕೈ ತಪ್ಪಿದೆ: ರಮಾನಾಥ ರೈ
ಮಂಗಳೂರು: ನಳಿನ್ ಕುಮಾರ್ ಕಟೀಲ್ ನಂಬರ್ ಒನ್ ಅಲ್ಲ, ಅನ್‌ಫಿಟ್ ಸಂಸದ. ಅವರು ಏನೂ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಅವರನ್ನು ಬದಲಾವಣೆ ಮಾಡಿದ್ದಾರೆ. ಅವರೇನು ಕೆಲಸ ಮಾಡಿಲ್ಲ ಎಂದು ಇದರಲ್ಲೇ ಅರ್ಥ ಆಗುತ್ತೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಗ್ಯಾರಂಟಿ ಯೋಜನೆಗಳು ಕೈಹಿಡಿಯಲಿವೆ. ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ.ನಾವು ಕೇವಲ ಘೋಷಣೆ ಮಾಡಿ ಬಿಟ್ಟುಬಿಟ್ಟಿಲ್ಲ, ಅನುಷ್ಠಾನ ಮಾಡಿದ್ದೇವೆ. ಮಹಿಳೆಯರಿಗೆ ಆರ್ಥಿಕ ಸಾಮಾಜಿಕ ಜೀವನ ಮಾಡುವ ಅವಕಾಶ ನೀಡಲಾಗಿದೆ. ರಾಜ್ಯದ ಮಹಿಳಾ ಸಮುದಾಯಕ್ಕೆ ಸಮಾಧಾನ ಸಿಕ್ಕಿದೆ ಎಂದರು.





