ಮಂಗಳೂರು: ಜಿಲ್ಲಾ ಕಾಂಗ್ರೆಸ್ ಮುಖಂಡ, ಸಮಾಜಸೇವಕ ಶೇಖರ್ ಸುವರ್ಣ ಬೆಂಗ್ರೆ ನಿಧನ
ಮಂಗಳೂರು : ಜಿಲ್ಲಾ ಕಾಂಗ್ರೆಸ್ ಮುಖಂಡ, ಸಮಾಜಸೇವಕ ಶೇಖರ್ ಸುವರ್ಣ ಬೆಂಗ್ರೆಯವರು ಹೃದಯಾಘಾತದಿಂದ ಇಂದು ನಿಧನರಾದರು.
ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಕಾಂಗ್ರೆಸ್ ಪಕ್ಷದ ಮಂಗಳೂರು ದಕ್ಷಿಣದ ವಿಭಾಗದ ಉಪಾಧ್ಯಕ್ಷರಾಗಿ ರಾಜಕೀಯ ಸೇವೆಯನ್ನು ಮಾಡಿದ ಬೆಂಗ್ರೆ ಮಹಾಜನ ಸಭಾ ಅಧ್ಯಕ್ಷರಾಗಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಜನಮನ್ನಣೆ ಪಡೆದಿದ್ದರು.
ಬೆಂಗ್ರೆ ಶೇಷಾಶಯನ ಮಂದಿರ ಅಲ್ಲದೆ ಇತರ ಧಾರ್ಮಿಕ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ನೀಡಿದ್ದರು. ಮೃತರ ಅಂತಿಮ ಯಾತ್ರೆಯು ಭಾನುವಾರ ಬೆಳಗ್ಗೆ ಗಂಟೆ 10 ಕ್ಕೆ ಮಂಗಳೂರು ಸ್ಯಾಡ್ಸ್ ಪಿಟ್ ಬೆಂಗ್ರೆಯ ಸ್ವಗೃಹದಲ್ಲಿ ಜರಗಲಿರುವುದು.





