March 19, 2026

ಮಂಗಳೂರು: ಬೋಂದೆಲ್ ಗುಡ್ಡ ಪ್ರದೇಶದ ಬಳಿ ಆಕಸ್ಮಿಕ ಬೆಂಕಿ ಅವಘಡ

0
image_editor_output_image1194975955-1710002152859.jpg

ಮಂಗಳೂರು: ನಗರದ ಬೋಂದೆಲ್ ಚರ್ಚ್ ಸಮೀಪದಲ್ಲಿ ಗುಡ್ಡ ಪ್ರದೇಶವೊಂದರ ಬಳಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿರುವ ಘಟನೆ ವರದಿಯಾಗಿದೆ.

ಯಾರೋ ಕಿಡಿಗೇಡಿಗಳು ಬೆಂಕಿ ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ಅವಘಡದಲ್ಲಿ ರಸ್ತೆ ಬದಿಯಲ್ಲಿ ಶೇಖರಿಸಿಟ್ಟಿದ್ದ ಗೈಲ್ ಕಂಪೆನಿಯ ಪೈಪ್ ಗಳಿಗೂ ಬೆಂಕಿ ತಗುಲಿದ್ದು, ಪೈಪ್ ಗಳು ಸುಟ್ಟು ಕರಕಲಾಗಿದೆ. ಇನ್ನು, ಮಂಗಳೂರು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದು, ಸಂಭವಿಸಲಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

ಸುಡು ಬಿಸಿಲಿನಲ್ಲಿ ಆಕಸ್ಮಿಕ ಹಾಗೂ ಕಿಡಿಗೇಡಿಗಳ ದುಷ್ಕೃತ್ಯಗಳಿಂದ ಬೆಂಕಿ ಅವಘಡಗಳು ಸಂಭವಿಸುತ್ತಿದೆ. ಬೆಂಕಿ ಅವಘಡ ಸಂಭವಿಸಿದ ತಕ್ಷಣ ಸಾರ್ವಜನಿಕರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿ ಅಥವಾ ಬೆಂಕಿ ನಂದಿಸುವಲ್ಲಿ ಸಹಕರಿಸಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕಿದೆ.

Leave a Reply

Your email address will not be published. Required fields are marked *

error: Content is protected !!