March 20, 2026

ಕುಂದಾಪುರ: ಮರಳು ತುಂಬಿದ ಟಿಪ್ಪರ್ ರಿವರ್ಸ್ ಬರುತ್ತಿದ್ದ ವೇಳೆ ಢಿಕ್ಕಿ: ಮನೆಯ ಗೇಟಿನ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ಸಾವು

0
image_editor_output_image-1626554022-1709362701242.jpg

ಕುಂದಾಪುರ: ತಂದೆಯ ತಿಥಿಯ ದಿನವೇ ಒಬ್ಬನೇ ಮಗ ಅಪಘಾತದಲ್ಲಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಶುಕ್ರವಾರ ತಾಲೂಕಿನ ಕಾಳಾವರದಲ್ಲಿ ನಡೆದಿದೆ.

ಕಾಳಾವರ ದಿ.ರಾಮಕೃಷ್ಣ ಆಚಾರ್ಯ ಅವರ ಪುತ್ರ ರಾಘವೇಂದ್ರ ಆಚಾರ್ಯ ಮೃತವ್ಯಕ್ತಿ.

ಮರಳು ತುಂಬಿದ ಟಿಪ್ಪರ್ ರಿವರ್ಸ್ ಬರುತ್ತಿದ್ದ ವೇಳೆ ಮನೆಯ ಗೇಟಿನ ಪಕ್ಕದಲ್ಲಿ ನಿಂತಿದ್ದ ರಾಘವೇಂದ್ರ ಆಚಾರ್ಯ ಅವರಿಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದು ಭೇಟಿನ ಪಿಲ್ಲರ್ ಮತ್ತು ಟಿಪ್ಪರ್ ನ ಹಿಂದುಗಡೆಯ ಬಾಡಿಗೆ ನಡುವೆ ಸಿಕ್ಕಿ ತಲೆ ಒಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗ್ರಾಮಾಂತರ ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!