December 16, 2025

ಮುಡಬಿದಿರೆ: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಆದಿರಾ ಕೇರಳದಲ್ಲಿ ಮದುವೆಯಾಗಿ ಪತ್ತೆ

0
image_editor_output_image1834570762-1708937989913.jpg

ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಯ ಬಿ.ಪಿ.ಟಿ ಪ್ರಥಮ ವರ್ಷದ ವಿದ್ಯಾರ್ಥಿನಿ ಆದಿರಾ ಎಂಬಾಕೆ ಫೆ. 23 ರಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಾಪತ್ತೆಯಾದ ವಿದ್ಯಾರ್ಥಿನಿ ಉಡುಪಿ ಜಿಲ್ಲೆ ಕೊಲ್ಲೂರಿನವಳಾಗಿರುವ ಆದಿರಾ ಆಳ್ವಾಸ್ ನಲ್ಲಿ ಕಲಿಯುತ್ತಿದ್ದು, ವಿದ್ಯಾಗಿರಿಯಲ್ಲಿರುವ ಶಾಂಭವಿ ಹಾಸ್ಟೆಲ್‌ ನ ಸಿ. ವಿಭಾಗದಲ್ಲಿ ವಾಸ್ತವ್ಯವಿದ್ದಳು.

ಫೆಬ್ರವರಿ 23 ಶುಕ್ರವಾರದಂದು ಬೆಳಿಗ್ಗೆ 7-45 ಕ್ಕೆ ಹಾಸ್ಟೆಲ್ ನಿಂದ ಆಳ್ವಾಸ್ ಬಸ್ ನಲ್ಲಿ ಬಂದು ಮೂಡುಬಿದಿರೆ ಕನ್ನಡಭವನದ ಬಳಿ ಇಳಿದು ಹೋದಾಕೆ ಕಾಲೇಜಿಗೂ ಹೋಗದೆ, ಹಾಸ್ಟೆಲ್ ಗೂ ಹೋಗದೆ, ಮನೆಗೂ ಹೋಗದೆ ನಾಪತ್ತೆಯಾಗಿದ್ದಾಳು.

ಇದೀಗ ನಾಪತ್ತೆ ಪ್ರಕರಣಕ್ಕೆ ವಿಚಿತ್ರ ತಿರುವು ಲಭಿಸಿದ್ದು, ನಾಪತ್ತೆಯಾದ ಆಳ್ವಾಸ್ ವಿದ್ಯಾರ್ಥಿನಿ ಆದಿರಾ ಕೇರಳದಲ್ಲಿ ಮದುವೆಯಾಗಿ ಪತ್ತೆಯಾಗಿದ್ದಾಳೆ. ಪ್ರಿಯಕರನೊಬ್ಬನನ್ನು ಪ್ರೀತಿಸುತ್ತಿದ್ದ ಈಕೆ ಕೇರಳಕ್ಕೆ ತೆರಳಿ ಮದುವೆಯಾಗುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

Leave a Reply

Your email address will not be published. Required fields are marked *

error: Content is protected !!