September 25, 2026

ಪುತ್ತೂರು: ಕಾವು ಹೇಮನಾಥ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

0
image_editor_output_image-1271671507-1708929012745.jpg

ಪುತ್ತೂರು: ಕಾವು ಹೇಮನಾಥ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಪೆಬ್ರವರಿ 24 ರಂದು ಬೆದ್ರಾಳ ಸಮೀಪ ನಡೆದಿದೆ.

ಪುರುಷರಕಟ್ಟೆ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಇನ್ನೋವಾ ಕಾರಿಗೆ ಮುಂಬಾಗದಿಂದ ಅಡ್ಡಾದಿಡ್ಡಿಯಾಗಿ ಚಲಿಸುತ್ತಾ ಬಂದ ಕಾರನ್ನು ಗಮನಿಸಿ ಅಪಘಾತ ತಪ್ಪಿಸಲು ಇನ್ನೋವಾ ಕಾರು ಚಾಲಕ ರಸ್ತೆ ಬದಿಯಲ್ಲಿರುವ ಸೇಫ್ ರೂಟಿಗೆ ಚಲಾಯಿಸುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿರುವ ಕೆಂಪು ಕಲ್ಲಿನ ಕಟ್ಟೆಗೆ ಇನ್ನೋವಾ ಕಾರು ಬಡಿದಿದ್ದು ಈ ರಭಸಕ್ಕೆ ಇನ್ನೋವಾ ಕಾರು ಸಂಪೂರ್ಣ ಜಖಂಗೊಂಡಿದೆ

 

ಎದುರಿಂದ ಬಂದ ಫೋರ್ಡ್ ಕಾರು ಕೂಡ ಅಲ್ಪ ಸ್ವಲ್ಪ ಜಖಂಗೊಂಡಿದೆ ಎನ್ನಲಾಗಿದೆ. ಇನ್ನೋವಾ ಕಾರಿನಲ್ಲಿಪ್ರಯಾಣಿಸುತಿದ್ದ ಹೇಮನಾಥ ಶೆಟ್ಟಿ ಹಾಗೂ ಅವರ ಬಳಗದವರಿಗೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!