July 3, 2026

ಪುತ್ತೂರು: ಅಕ್ಷಯ್ ಕಲ್ಲೇಗ ಕೊಲೆಗೆ ರಿವೇಂಜ್ ಕೊಲೆಗೆ ಸ್ಕೆಚ್: ಕಿಶೋರ್ ಕಲ್ಲಡ್ಕ ಸಹಿತ ನಾಲ್ವರ ಬಂಧನ

0
image_editor_output_image2002770734-1708505763379.jpg

ಪುತ್ತೂರು: ಅಕ್ಷಯ್ ಕಲ್ಲೇಗ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿವೇಂಜ್ ಕೊಲೆ ಮಾಡಲು ಹೊಂಚು ಹಾಕುತ್ತಿದ್ದ ನಾಲ್ವರನ್ನು ಪುತ್ತೂರು ಪೊಲೀಸರು ಅರೆಸ್ಟ್ ಮಾಡಿದ್ದು, ಆಗಬಹುದಾಗಿದ್ದ ಕೃತ್ಯವನ್ನು ಪೊಲೀಸರು ತಡೆದಿದ್ದಾರೆ.

ಬಂಧಿತರನ್ನು ಬಂಟ್ವಾಳ ನಿವಾಸಿ ಕಿಶೋರ್‌ ಕಲ್ಲಡ್ಕ (36), ಪುತ್ತೂರಿನ ಮನೋಜ್‌ (23), ಆಶಿಕ್‌ (28), ಸನತ್‌ ಕುಮಾರ್‌ (24) ಎಂದು ಗುರುತಿಸಲಾಗಿದೆ.

ಬಂಧಿತರು ಅಕ್ಷಯ್ ಕಲ್ಲೆಗ ಕೊಲೆ ಪ್ರಕರಣದ ಆರೋಪಿ ಮನೀಶ್ ಸಹೋದರ ಮನೋಜ್ ನ ಮೇಲೆ ಸೇಡು ತೀರಿಸಿಕೊಳ್ಳಲು ಹಾಕಿದ್ದರು. ಈ ಮೊದಲು ಮನೋಜ್ ಗೆ ಬೆದರಿಕೆ ಕರೆ ಮಾಡಿರುವ ಆರೋಪಿಗಳು ನಿನ್ನ ತಮ್ಮ ಮನೀಶ್ ಹಾಗೂ ಉಳಿದ ಆರೋಪಿಗಳು ಜೈಲಿನಿದ್ದಾರೆ, ಆದ್ರೆ ನಿನ್ನನ್ನ ಬಿಡಲ್ಲ ಎಂದು ಫೋನ್ ಕರೆ ಮಾಡಿ ಬೆದರಿಕೆ ಹಾಕಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!