ಐದು ಮಂದಿ ಅಪ್ರಾಪ್ತ ಹೆಣ್ಣು ಮಕ್ಕಳೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ
ರಾಜಸ್ಥಾನ: ಮಹಿಳೆಯೋರ್ವಳು ತನ್ನ ಐವರು ಹೆಣ್ಣುಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನ ಕಲಿಯಾಹೆಡಿ ಗ್ರಾಮದಲ್ಲಿ ನಡೆದಿದೆ.
ಶಿವಲಾಲ್ ಬಂಜಾರ ಪತ್ನಿ ಬದ್ಮಾದೇವಿ ತನ್ನ ಅಪ್ರಾಪ್ತ ಐವರು ಹೆಣ್ಣುಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿತ್ರಿ (14), ಅಂಕಲಿ (8), ಕಾಜಲ್ (6), ಗುಂಜನ್ (4) ಮತ್ತು ಒಂದು ವರ್ಷದ ಅರ್ಚನಾ ಮೃತ ಬಾಲಕಿಯರು.
ಪತಿಯೊಂದಿಗೆ ಕಿರುಕುಳದಿಂದ ಮಹಿಳೆ ಬೇಸತ್ತು ಆತ್ಮಹತ್ಯೆ ಹಾದಿಯನ್ನು ಹಿಡಿದಿದ್ದಾರೆ. ತನ್ನ ಎಲ್ಲಾ ಮಕ್ಕಳನ್ನು ಆತ್ಮಹತ್ಯೆಗೆ ದೂಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರು. ನಂತರ ಮೃತದೇಹಗಳನ್ನು ಬಾವಿಯಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ.





