February 3, 2026

ಉಪ್ಪಿನಂಗಡಿ: ಧಾರ್ಮಿಕ ವಿದ್ವಾಂಸ ಸೈಯದ್ ಸಾದಾತ್ ಅಲಿ ತಂಙಳ್ ಕರ್ವೇಲ್ ನಿಧನ

0
image_editor_output_image1623294826-1708059485653.jpg

ಉಪ್ಪಿನಂಗಡಿ: ಹನ್ನೆರಡು ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಧಾರ್ಮಿಕ ವಿದ್ವಾಂಸ ಸೈಯದ್ ಸಾದಾತ್ ಅಲಿ ತಂಙಳ್ ಕರ್ವೇಲ್ ನಿಧನರಾಗಿದ್ದಾರೆ.

5ರಂದು ಸಾದಾತ್ ಅಲಿ ತಂಙಳ್ ಸಂಚರಿಸುತ್ತಿದ್ದ ಆಟೊ ರಿಕ್ಷಾವು ಪುತ್ತೂರು ತಾಲೂಕು ಬೆಳ್ಳಿಪ್ಪಾಡಿ ಗ್ರಾಮದ ಶಾಂತಿನಗರ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿತ್ತು.

ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ಸಾದಾತ್ ಅಲಿ ತಂಙಳ್ ರಿಗೆ ಗಂಭೀರ ಗಾಯಗಳಾಗಿತ್ತು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು

Leave a Reply

Your email address will not be published. Required fields are marked *

error: Content is protected !!