March 21, 2026

ಉಡುಪಿ: ನೀರಿನ ಟ್ಯಾಂಕರ್ ಸ್ಕೂಟರ್ ಗೆ ಢಿಕ್ಕಿ: ಸ್ಕೂಟರ್ ಚಾಲಕ ಸ್ಥಳದಲ್ಲೇ ಸಾವು

0
image_editor_output_image298838143-1707807094764.jpg

ಉಡುಪಿ: ನೀರಿನ ಟ್ಯಾಂಕರ್ ವೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿಯ ದೊಡ್ಡಣಗುಡ್ಡೆಯ ರೈಲ್ವೆ ಸೇತುವೆ ಬಳಿ ನಡೆದಿದೆ.

ಪೆರಂಪಳ್ಳಿ ನಿವಾಸಿ ಮಂಜು (40) ಮೃತಪಟ್ಟವರು. ವೃತ್ತಿಯಲ್ಲಿ ಬಸ್‌ ಚಾಲಕನಾಗಿದ್ದ ಮಂಜು ಅವರು ಸ್ಕೂಟ‌ರ್ ಮೂಲಕ ಪೆರಂಪಳ್ಳಿಯ ತಮ್ಮ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಮಾಹಿತಿ ಪಡೆದ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಸ್ಥಳಕ್ಕೆ ಧಾವಿಸಿ ತಮ್ಮ ಆಂಬುಲೆನ್ಸ್ ಮೂಲಕ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ನೆರವಾದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಗಾಯಾಳು ಮೃತಪಟ್ಟ ಬಗ್ಗೆ ಘೋಷಣೆ ಮಾಡಿದ್ದಾರೆ ಎಂದು ನಿತ್ಯಾನಂದ ವಳ ಕಾಡು ತಿಳಿಸಿದ್ದಾರೆ. ಪ್ರಕರಣ ಮಣಿಪಾಲ ಠಾಣೆಯಲ್ಲಿ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!