March 21, 2026

ಗೃಹಿಣಿ ಆತ್ಮಹತ್ಯೆ: ಪತಿ ಪ್ರವೀಣ್ ಸೇರಿ ನಾಲ್ವರ ವಿರುದ್ಧ ದೂರು ದಾಖಲು

0
image_editor_output_image1304063733-1707720116588.jpg

ಬೆಂಗಳೂರು: ಗೃಹಿಣಿಯೊಬ್ಬರಯ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ರಾಜಗೋಪಾಲನಗರದಲ್ಲಿ ನಡೆದಿದೆ.

ಕಾವ್ಯ ಮೃತ ಗೃಹಿಣಿ. ಮಗಳು ನೇಣಿಗೆ ಶರಣಾಗಲು ಪತಿಯ ಅಕ್ರಮ ಸಂಬಂಧವೇ ಕಾರಣ ಎಂದು ಕಾವ್ಯ ಪೋಷಕರು ಆರೋಪಿಸಿದ್ದಾರೆ.

ಪತಿ ಪ್ರವೀಣ್ ಸೇರಿ ನಾಲ್ವರ ವಿರುದ್ಧ ದೂರು ನೀಡಿರುವ ಪೋಷಕರು ಅಳಿಯನನ್ನ ನಮಗೆ ಒಪ್ಪಿಸುವಂತೆ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.

ಮೃತ ಕಾವ್ಯಳ ಪತಿ ಪ್ರವೀಣ್, ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ. ಆದರೆ ಎಲ್ಲಿಯೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆದರೆ ಅಳಿಯನ ಜೊತೆ ಹುಡುಗಿಯೊಬ್ಬಳ ಅಕ್ರಮ ಸಂಬಂಧವಿತ್ತು. ಹೆಂಡತಿ, ಮಗುವಿಗಿಂತ ಅವಳೇ ಅಳಿಯನಿಗೆ ಹೆಚ್ಚಾಗಿದ್ದಳು. ಈ ಬಗ್ಗೆ ಪ್ರಶ್ನೆ ಮಾಡಿದರೆ ತಂಗಿ ಎಂದು ಹೇಳಿದ್ದ. ಕುಟುಂಬಸ್ಥರೇ ಮೃತದೇಹವನ್ನು ಕೆಳಗಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!