March 21, 2026

ಸುಳ್ಯ: ಕೆಎಸ್ಆ‌ರ್‌‌ಟಿಸಿ ಬಸ್‌-ಸ್ಕೂಟಿ ನಡುವೆ ಅಪಘಾತ: ಸ್ಕೂಟಿ ಸವಾರ ಮೃತ್ಯು

0
image_editor_output_image1940987036-1707670789940.jpg

ಸುಳ್ಯ: ಗುತ್ತಿಗಾರು ಬಾಕಿಲ ಎಂಬಲ್ಲಿ ಸುಳ್ಯದಿಂದ ಗುತ್ತಿಗಾರು ಕಡೆ ಬರುತ್ತಿದ್ದ ಸ್ಕೂಟಿಗೆ ಎದುರಿನಿಂದ ಬಂದ ಕೆ.ಎಸ್.ಆ‌ರ್.ಟಿ.ಸಿ ಬಸ್‌ ಗುದ್ದಿದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟ ಘಟನೆ ಇಂದು ನಡೆದಿದೆ.

ನಡುಗಲ್ಲು ನಿವಾಸಿ ಶಿವರಾಮ ಗೌಡ (70) ಮೃತಪಟ್ಟ ದುರ್ದೈವಿ. ಹಿಂಬದಿ ಕುಳಿತಿದ್ದ ಮಗಳು ನವ್ಯಶ್ರೀ ಯ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಪೆರಾಜೆ ದೇವಸ್ಥಾನಕ್ಕೆ ತೆರಳಿ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮೃತರು ಪತ್ನಿ ದೇವಕಿ, ಪುತ್ರರಾದ ಉಲ್ಲಾಸ್, ಹಿತೇಶ್, ಪುತ್ರಿಯರಾದ ಕಾವ್ಯಶ್ರೀ, ಮಧುಶ್ರೀ, ಧನುಶ್ರೀ, ಸ್ವಾತಿ ಹಾಗೂ ನವ್ಯಶ್ರೀ ಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!