March 21, 2026

ಮಡಿಕೇರಿ: ಯುವಕನ ಕೊಲೆ, ಆರೋಪಿಯ ಬಂಧನ

0
image_editor_output_image1227296704-1707203386347.jpg

ಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ.

ಸಾಜಿದ್ (22) ಕೊಲೆಯಾದ ಯುವಕನಾಗಿದ್ದಾನೆ. ಮೈಸೂರು ರಸ್ತೆಯಲ್ಲಿರುವ ಸಾಜಿದ್ ಶ್ರೀನಿಧಿ ಎಂಬವರ ಸರ್ವಿಸ್ ಸ್ಟೇಷನ್ಗೆ ಬೈಕ್ ಸರ್ವಿಸ್ ಮಾಡಲೆಂದು ಸಾಜೀದ್ ಆಗಮಿಸಿದ್ದನು. ಈ ವೇಳೆ ಇಬ್ಬರ ನುಡವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ.

ಜಗಳದ ವೇಳೆ ಶ್ರೀನಿಧಿ ಹರಿತವಾದ ಆಯುಧದಿಂದ ಸಾಜಿದ್ಗೆ ಇರಿದಿದ್ದಾನೆ. ಕೂಡಲೇ ಸಾಜಿದ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಕೃತ್ಯ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕುಶಾಲನಗರ ಟೌನ್ ಠಾಣಾ ಪೊಲೀಸರು ಆರೋಪಿ ಶ್ರೀನಿಧಿನನ್ನು ಬಂಧಿಸಿದ್ದಾರೆ

Leave a Reply

Your email address will not be published. Required fields are marked *

You may have missed

error: Content is protected !!