March 21, 2026

ಉಳ್ಳಾಲ: ಕ್ರಿಕೆಟ್ ಪಂದ್ಯಾಟದ ವೇಳೆ ಜೇನುನೊಣಗಳ ದಾಳಿ: ಗ್ರೌಂಡಿನಿಂದ ಓಟಕ್ಕಿತ್ತ ಆಟಗಾರರು

0
image_editor_output_image-850966813-1707114596645.jpg

ಉಳ್ಳಾಲ: ಇಲ್ಲಿನ ಒಂಭತ್ತುಕೆರೆ ಸಮೀಪ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟದ ವೇಳೆ ಬ್ಯಾಟ್ಸ್ ಮೆನ್ ಹೊಡೆದ ಚೆಂಡು ಮರದಲ್ಲಿದ್ದ ಜೇನಿನಗೂಡಿಗೆ ಬಿದ್ದ ಪರಿಣಾಮ ಆಟಗಾರರ ಮೇಲೆ ಜೇನುನೊಣಗಳು ದಾಳಿ ನಡೆಸಿ ಕ್ರಿಕೆಟ್ ಗ್ರೌಂಡಿನಿಂದ ಎಲ್ಲರೂ ಓಟಕ್ಕಿತ್ತ ಘಟನೆ ನಡೆದಿದೆ.

ಸೋಮೇಶ್ವರ ಒಂಭತ್ತುಕೆರೆಯ ಅನಿಲ ಕಂಪೌಂಡ್ ಎಂಬಲ್ಲಿ ಸ್ಥಳೀಯರೇ ಆಯೋಜಿಸಿದ ಕ್ರಿಕೆಟ್ ಪಂದ್ಯಾಟ ಭಾನುವಾರ ನಡೆಯುತಿತ್ತು.

ಈ ಸಂದರ್ಭ ಬ್ಯಾಟ್ಸ್ ಮೆನ್ ಓರ್ವರು ಹೊಡೆದ ಬಾಲ್ ತೆಂಗಿನಮರದಲ್ಲಿದ್ದ ಜೇನಿನ ಗೂಡಿಗೆ ಬಡಿದಿದೆ. ಗೂಡು ಒಡೆದ ಪರಿಣಾಮ ಜೇನು ನೊಣಗಳು ಬ್ಯಾಟ್ ಮೆನ್ ಸಮೇತ ಆಟಗಾರರ ಮೇಲೆ ದಾಳಿ ನಡೆಸಿದ್ದು, ದಾಳಿಯಿಂದ ತಪ್ಪಿಸಲು ಕ್ರೀಡಾಂಗಣದಲ್ಲಿದ್ದ ಎಲ್ಲರೂ ಓಟಕ್ಕಿತ್ತು ಪಂದ್ಯಾಟವೇ ರದ್ದಾಗುವಂತಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!