ನಡು ರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಕೊಲೆಗೈದು ಪೊಲೀಸರಿಗೆ ಶರಣಾದ ಆರೋಪಿ
ಚಿಕ್ಕಬಳ್ಳಾಪುರ: ನಡು ರಸ್ತೆಯಲ್ಲಿ ವ್ಯಕ್ತಿಯ ಬರ್ಬರ ಕೊಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿರುವ ಘಟನೆ ಚಿಂತಾಮಣಿ ನಗರದ ಟಿಪ್ಪು ಬಡಾವಣೆಯ ಅಂಗಡಿ ಮುಂದೆ ನಡೆದಿದೆ.
ಜಾಬೀರ್ ಪಾಷ ಅಲಿಯಾಸ್ ನೇಪಾಳ್ (26) ಕೊಲೆಯಾದ ವ್ಯಕ್ತಿ. ಆರೋಪಿ ಮುಕ್ತಿಯಾರ್ ಪಾಷಾ ಮತ್ತು ಜಾಬೀರ್ ನಡುವೆ ಯಾವುದೋ ವೈಯಕ್ತಿಕ ದ್ವೇಷ ಇತ್ತು. ಪರಿಣಾಮ ಆತ ಮಧ್ಯರಾತ್ರಿ ನಡು ರಸ್ತೆಯಲ್ಲಿ ಜಾಬೀರ್‌ನನ್ನು ದಾರುಣವಾಗಿ ಕೊಲೆ ಮಾಡಿದ್ದಾನೆ.




