TAIF NIGHT -2024 ಕ್ರಿಕೆಟ್ ಪಂದ್ಯಾಟ: ತಾಯಿಫ್ ನೈಟ್ ರೈಡರ್ಸ್ ಚಾಂಪಿಯನ್
ತಾಯಿಫ್ : ತಾಯಿಫ್ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್_ (ತಾಯಿಫ್ ಸೌದಿ ಅರೇಬಿಯಾ)
ಇದರ ಆಶ್ರಯದಲ್ಲಿ ನಡೆದ ತಾಯಿಫ್ ನ ಇತಿಹಾಸದಲ್ಲೇ ಮೊಟ್ಟ ಮೊದಲು ಬಾರಿಗೆ ಅಂಡರ್ ಆರ್ಮ್ ಮಾದರಿಯ *TAIF NIGHT -2024* ಇದರ ಭಾಗವಾಗಿ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟವು ತಾಯಿಫ್ ‘ನ ಅಲ್’ಮತ್ನಾದಲ್ಲಿ ನಡೆಯಿತು,
ಫೆಬ್ರವರಿ 1ರ ಗುರುವಾರ ರಾತ್ರಿ ಸಂಘದ ಅಧ್ಯಕ್ಷರಾದ ಮನ್ಸೂರ್ ಗುರುಪುರ, ನಾಯಕ ಸಲೀಂ ಸೂರಿಂಜೆ, ಮಾಜಿ ನಾಯಕ ಸಲೀಂ ಪಲ್ಲಕುಡಲ್, ಮಾಜಿ ಉಪನಾಯಕ ಅಲ್ತಾಫ್ ಗುರುಪುರ ಹಾಗೂ ಸಂಘದ ಇತರ ಸದಸ್ಯರ ಉಪಸ್ಥಿತಿಯಲ್ಲಿ ಇಮ್ತಿಯಾಜ್ ಕುಂದಾಪುರ ಪಂದ್ಯಾಟವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿದರು.

ಬಹಳ ರೋಚಕ, ರೋಮಾಂಚಕಾರಿಯಾಗಿ ಸಾಗಿದ
ಪಂದ್ಯಾಕೂಟದಲ್ಲಿ
ಅಲ್ತಾಫ್ ಗುರುಪುರ ನಾಯಕತ್ವದ HILAL BROTHERS,
ರಶೀದ್ ವಲಚ್ಚಿಲ್ ನಾಯಕತ್ವದ 7Star MANGALORE,
ಸಲೀಂ ಪಲ್ಲಕುಡಲ್ ನೇತೃತ್ವದ TAIF KNIGHT WARRIORS,
ದಾವೂದ್ ಗುರುಪುರ ನಾಯಕತ್ವದ JOLLY BOYS
ಮತ್ತು ರಝಾಕ್ ಕೊಡಂಗಾಯಿ ನಾಯಕತ್ವದ TAIF KNIGHT RIDERS ತಂಡಗಳು ಭಾಗವಹಿಸಿದ್ದವು.
ಉತ್ತಮ ಪ್ರದರ್ಶನದೊಂದಿಗೆ ಆಡಿದ 7star Mangalore ಲೀಗ್ ಹಂತದಲ್ಲೇ ಹೊರನಡೆದರೆ,
ಉಳಿದ ನಾಲ್ಕು ತಂಡಗಳಲ್ಲಿ TAIF KNIGHT WARRIORS VS HILAL BROTHERS ಮೊದಲ ಸೆಮಿ ಮತ್ತು TAIF KNIGHT RIDERS VS JOLLY BOYS ಎರಡನೇ ಸೆಮಿ ಫೈನಲ್ ಆಡಿ HILAL BROTHERS ಮತ್ತು TAIF KNIGHT RIDERS ಫೈನಲ್ ಪ್ರವೇಶಿಸಿ ಜಿದ್ದಾ ಜಿದ್ದಿನ ಆಟಕ್ಕೆ ಸಾಕ್ಷಿಯಾಯಿತು.
ಫೈನಲ್ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ಸಂಘಟಿಸಿ TAIF KNIGHT RIDERS ಎದುರಾಳಿಯನ್ನು ಸೋಲಿಸುವ ಮೂಲಕ ಹೊನಲು ಬೆಳಕಿನ ಪಂದ್ಯಾಟದಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿ ಇತಿಹಾಸ ಬರೆದರೆ, HILAL BROTHERS ರನ್ನರ್ ಪ್ರಶಸ್ತಿ ಗೆ ತೃಪ್ತಿ ಪಟ್ಟಿತು.




