September 26, 2026

ಕಾಪು: ಮೀನುಗಾರಿಕಾ ಬೋಟನ್ನು ತಡೆದು ಹಲ್ಲೆ: ಲಕ್ಷಾಂತರ ರೂ. ಮೌಲ್ಯದ ಮೀನು ಸಹಿತ ಸೊತ್ತುಗಳ ದರೋಡೆ

0
image_editor_output_image601293793-1706763861320.jpg

ಕಾಪು: ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟನ್ನು ತಡೆದು ಮೀನುಗಾರರಿಗೆ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮೀನು ಹಾಗೂ ಮೀನುಗಾರರ ಬಳಿಯಿದ್ದ ಮೊಬೈಲ್‌ ಫೋನ್‌ ಸಹಿತ ಸೊತ್ತುಗಳನ್ನು ದರೋಡೆಗೈದಿರುವ ಘಟನೆ ಕಾಪು ಲೈಟ್‌ ಹೌಸ್‌ ಸಮೀಪದಲ್ಲಿ ಮಂಗಳವಾರ ನಡೆದಿದೆ.

ಆಂಧ್ರಪ್ರದೇಶದ ಮೀನುಗಾರರಾದ ಪರ್ವತಯ್ಯ, ಕೊಂಡಯ್ಯ, ರಘು ರಾಮಯ್ಯ, ಶಿವರಾಜ್‌, ಕೆ. ಶೀನು, ಏಳುಮಲೆ, ಚಿನ್ನೋಡು, ರಾಜು ಅವರು ಜ. 27ರಂದು ಮಹಮ್ಮದ್‌ ಮುಸ್ತಫ್‌ ಬಾಷಾ ಅವರಿಗೆ ಸೇರಿದ ಮಿರಾಶ್‌ – 2 ಟ್ರಾಲ್‌ ಬೋಟ್‌ನಲ್ಲಿ ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ಹೊರಟಿದ್ದು ಮೀನುಗಳನ್ನು ಹಿಡಿದುಕೊಂಡು ಮರಳಿ ಹೋಗುತ್ತಿರುವಾಗ ಜ. 30ರಂದು ಬೆಳಿಗ್ಗೆ 5 ಗಂಟೆಗೆ ಕಾಪು ಲೈಟ್‌ ಹೌಸ್‌ನಿಂದ 10 ನಾಟಿಕಲ್‌ ಮೈಲ್‌ ದೂರ ಸಮುದ್ರ ಮಧ್ಯದಲ್ಲಿ ಹಲ್ಲೆ ನಡೆಸಿ, ಮೀನುಗಳನ್ನು ದರೋಡೆಗೈದಿರುವುದಾಗಿ ತಿಳಿದು ಬಂದಿದೆ

 

Leave a Reply

Your email address will not be published. Required fields are marked *

You may have missed

error: Content is protected !!