March 17, 2026

ಬಂಟ್ವಾಳ: ಅರಳ ಗ್ರಾ.ಪಂ: ವಿಶೇಷ ಚೇತನರ ಗ್ರಾಮ ಸಭೆ

0
image_editor_output_image-1340222146-1706722112837

ಬಂಟ್ವಾಳ ತಾಲೂಕಿನ ಅರಳ ಗ್ರಾಮ ಪಂಚಾಯತ್ ನಲ್ಲಿ 2023-2024ನೇ ಸಾಲಿನ  ವಿಶೇಷ ಚೇತನರ ಗ್ರಾಮ ಸಭೆ ನಡೆಯಿತು.
ಸಭೆಯ ಸಭಾ ಅಧ್ಯಕ್ಷತೆಯನ್ನು ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ದೇವಕಿ ಯವರು ವಹಿಸಿಕೊಂಡಿದ್ದರು ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಧರ್ಮರಾಜ.ಪಿ.ಉಪಾಧ್ಯಕ್ಷರಾದ ಶ್ರೀ ಚಂದ್ರಹಾಸ ಪೂಜಾರಿ ಹಾಗೂ ಪಂಚಾಯಿತಿನ ಎಲ್ಲಾ ಗೌರವಾನ್ವಿತ ಸದಸ್ಯರು   ಅರಳ ಗ್ರಾಮದ ಪುನರ್ವಸತಿ ಕಾರ್ಯಕರ್ತರಾ ದ ಶ್ರೀ ಸಾಹುಲ್ ಹಮೀದ್, ಪಂಚಾಯತ್ ಕಾರ್ಯದರ್ಶಿ ಮತ್ತು ಪಂಚಾಯತ್ ಸಿಬ್ಬಂದಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳಾದ ಸಾಗರ್ ಮತ್ತು ಸಚಿನ್  ಉಪಸ್ಥಿತರಿದ್ದರು.                                   ಸಭೆಯ ಕೇಂದ್ರ ಬಿಂದುವಾದ ವಿಶೇಷ ಚೇತನರು ಮತ್ತು ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸ್ವಾಗತಿಸಿ ಮಾಹಿತಿ ನೀಡಿದರು ಮತ್ತು ತಮ್ಮಪ್ಪ ಶೆಟ್ಟಿಗಾರ್ ರವರಿಗೆ ಯುಡಿಐಡಿ ಕಾರ್ಡನ್ನು ಮತ್ತು ಪಂಚಾಯತ್ ನ ೦.೦5% ಅನುದಾನದ ಚೆಕ್ ಗಳನ್ನು ವಿತರಿಸಲಾಯಿತು. ಪಂಚಾಯತ್ ಕಾರ್ಯದರ್ಶಿ ಉದಯ ಕುಮಾರ್ ರವರು ಧನ್ಯವಾದ ದೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

Leave a Reply

Your email address will not be published. Required fields are marked *

You may have missed

error: Content is protected !!