December 19, 2025

ದ.ಕ ಜಿಲ್ಲಾ ದಾರಿಮೀಸ್ 19ನೇ ವಾರ್ಷಿಕೋತ್ಸವ:
ಶೈಖುನಾ ಶಂಸುಲ್ ಉಲಮಾ ಅನುಸ್ಮರಣೆ, ಮುತಅಲ್ಲಿಂ ಫೆಸ್ಟ್ -2021

0
IMG-20211204-WA0076.jpg

ಬಿ.ಸಿ.ರೋಡ್: ದ.ಕ.ಜಿಲ್ಲಾ ದಾರಿಮೀಸ್ ಅಸೋಸಿಯೇಷನ್ ಇದರ 19 ನೇ ವಾರ್ಷಿಕೋತ್ಸವದ ಪ್ರಯುಕ್ತ ಶೈಖುನಾ ಶಂಸುಲ್ ಉಲಮಾ ಅನುಸ್ಮರಣೆ, ಹಾಗೂ ದ.ಕ.ಜಿಲ್ಲಾ ಮಟ್ಟದ ಅರಬಿಕ್ ಕಾಲೇಜ್ ಮತ್ತು ದರ್ಸ್ ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ‘ಮುತಅಲ್ಲಿಂ ಫೆಸ್ಟ್ – 2021’ ಕಾರ್ಯಕ್ರಮವು ನಂದಾವರ ಜುಮಾ ಮಸೀದಿಯ ಸಭಾಂಗಣದ ಶಂಸುಲ್ ಉಲಮಾ ವೇದಿಕೆಯಲ್ಲಿ ಶುಕ್ರವಾರ ಜರಗಿತು.

ಸಮಾರೋಪ ಸಮಾರಂಭದಲ್ಲಿ ಅನುಸ್ಮರಣಾ ಭಾಷಣ ನಡೆಸಿದ ‘ಸಮಸ್ತ’ ಕೇಂದ್ರ ಮುಶಾವರ ಸದಸ್ಯ ಎ.ವಿ‌.ಅಬ್ದುರ್ರಹ್ಮಾನ್ ಮುಸ್ಲಿಯಾರ್ ನಂದಿ ಅವರು ಮಾತನಾಡಿ ಪವಿತ್ರ ಧರ್ಮದ ಪರಂಪರಾಗತ ತಾತ್ವಿಕ ನೆಲೆಗಟ್ಟಿನಲ್ಲಿ ಕೆಡುಕು ಮುಕ್ತ ಒಳಿತಿನ ಸಮಾಜ ಕಟ್ಟುವ ಜವಾಬ್ದಾರಿ ಉಲಮಾಗಳ ಮೇಲಿದೆ. ಅದ್ದರಿಂದ ಧರ್ಮ ಹಾಗೂ ಸಮಾಜಕ್ಕಾಗಿ ಅಹರ್ನಿಶಿ ದುಡಿದು ಅಗಲಿದ ‘ಸಮಸ್ತ’ ದ ನಾಯಕ ವಿಶ್ವೋತರ ವಿದ್ವಾಂಸ ಶೈಖುನಾ ಶಂಸುಲ್ ಉಲಮಾ ರವರನ್ನು ಮಾದರಿಯಾಗಿಸಿ ಉಲಮಾಗಳು ಹಾಗೂ ಧಾರ್ಮಿಕ ಸಂಘಟನೆಗಳು ಒಗ್ಗಟ್ಟಾಗಿ ಕಾರ್ಯ ಪ್ರವೃತರಾಗಬೇಕು ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಜಿಲ್ಲಾಧ್ಯಕ್ಷ ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಕೊಡಂಗಾಯಿ ಅವರು ವಹಿಸಿದ್ದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಿ.ಕೆ.ಅಬ್ದುಲ್ ಖಾದಿರ್ ಖಾಸಿಮಿ ಬಂಬ್ರಾಣ ಕಾರ್ಯಕ್ರಮ ಉದ್ಘಾಟಿಸಿದರು.
ಕೇರಳದ ವಾಗ್ಮಿ ಸಿರಾಜುದ್ದೀನ್ ದಾರಿಮಿ ಕಕ್ಕಾಡ್ ಮುಖ್ಯ ಭಾಷಣಗೈದರು. ಕೆ.ಎಂ.ಖಾಸಿಂ ದಾರಿಮಿ ನಂದಾವರ ಪ್ರಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಶುಭ ಹಾರೈಸಿದರು.

ಸಯ್ಯಿದ್ ಅಮೀರ್ ತಂಙಳ್ ಕಿನ್ಯ ಅವರ ನೇತೃತ್ವದಲ್ಲಿ ಮಜ್ಲಿಸ್ ನೂರ್ ಆಧ್ಯಾತ್ಮಿಕ ಸಂಗಮ ಹಾಗೂ ದರ್ಗಾ ಝಿಯಾರತ್ ನಡೆಯಿತು. ನಂದಾವರ ಜಮಾಅತ್ ಅಧ್ಯಕ್ಷ ಶರೀಫ್ ನಂದಾವರ ಧ್ವಜಾರೋಹಣ ಗೈದರು.

ಸಮಾರಂಭದಲ್ಲಿ ಕೆ.ಅರ್.ಹುಸೈನ್ ದಾರಿಮಿ, ತಬೂಕ್ ಅಬ್ದುರ್ರಹ್ಮಾನ್ ದಾರಿಮಿ , ಹನೀಫ್ ದಾರಿಮಿ ಸವಣೂರು, ಅಹ್ಮದ್ ದಾರಿಮಿ ಕಂಬಳಬೆಟ್ಟು, ಮೂಸಾ ದಾರಿಮಿ ಕಕ್ಕಿಂಜೆ, ಅನ್ಸಾರುದ್ದೀನ್ ಫೈಝಿ ಕಣ್ಣೂರ್, ಮುಸ್ತಫಾ ಅನ್ಸಾರಿ ಕಣ್ಣೂರ್, ಶರೀಫ್ ಮೌಲವಿ ಪರಪ್ಪು, ನಂದಾವರ ಜಮಾಅತ್ ಉಪಾಧ್ಯಕ್ಷ ಬಶೀರ್, ಕಾರ್ಯದರ್ಶಿ ನಾಸಿರ್, ಜೊತೆ ಕಾರ್ಯದರ್ಶಿ ಶಾಫಿ ನಂದಾವರ, ಕೋಶಾಧಿಕಾರಿ ಹೈದರ್, ತೋಡಾರ್ ಉಸ್ಮಾನ್ ಹಾಜಿ ಏರ್ ಇಂಡಿಯಾ, ಹಕೀಂ ಪರ್ತಿಪ್ಪಾಡಿ, ಅಬ್ದುಲ್ ಖಾದರ್ ಮಾಸ್ಟರ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ನಡೆದ ದ.ಕ.ಜಿಲ್ಲಾ ಮಟ್ಟದ ಅರಬಿಕ್ ಕಾಲೇಜ್ ಮತ್ತು ದರ್ಸ್ ವಿದ್ಯಾರ್ಥಿಗಳ ಇಸ್ಲಾಮಿಕ್ ಸಾಹಿತ್ಯ ಸ್ಪರ್ಧೆಯಲ್ಲಿ ತೋಡಾರ್ ಶಂಸುಲ್ ಉಲಮಾ ಅರಬಿಕ್ ಕಾಲೇಜ್ ಪ್ರಥಮ ಹಾಗೂ ಕಾಶಿಪಟ್ನ ದಾರುನ್ನೂರ್ ವಿದ್ಯಾಸಂಸ್ಥೆಯು ದ್ವಿತೀಯ ಸ್ಥಾನವನ್ನು ಪಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸ್ವಾಗತ ಸಮಿತಿ ಸಂಚಾಲಕ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ ಸ್ವಾಗತಿಸಿ, ದಾರಿಮೀಸ್ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಕರೀಂ ದಾರಿಮಿ ವಂದಿಸಿದರು. ಕೆ.ಎಂ.ಎ.ಕೊಡುಂಗಾಯಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!