September 19, 2024

ವಿಟ್ಲ: ಫೆಬ್ರವರಿ 3 ಮತ್ತು 4ರಂದು ಕೊಡಂಗೆಯಲ್ಲಿ ದಫ್ ರಾತೀಬ್ ಕಮಿಟಿಯ 26ನೇ ವಾರ್ಷಿಕೋತ್ಸವ

0

ವಿಟ್ಲ: ಖಿಲ್‌ರಿಯಾ ಜುಮ್ಮಾ ಮಸೀದಿ, ಜೀಲಾನಿ ನಗರ – ಕೊಡಂಗೆ ಇದರ ಆಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಯಾತುಲ್ ಇಸ್ಲಾಂ ದಫ್ಟ್ ರಾತೀಬ್ ಕಮಿಟಿಯ 26ನೇ ವಾರ್ಷಿಕೋತ್ಸವದ ಅಂಗವಾಗಿ ಫೆಬ್ರವರಿ 3 ಮತ್ತು 4ರಂದು 2 ದಿನದ ಮತ ಪ್ರಭಾಷಣ ಕಾರ್ಯಕ್ರಮ ಜೀಲಾನಿ ನಗರ, ಕೊಡಂಗೆಯಲ್ಲಿ ನಡೆಯಲಿದೆ.

ಫೆಬ್ರವರಿ 3ರ ಶನಿವಾರ ಮುಖ್ಯ ಪ್ರಭಾಷಣರಾಗಿ ಮುಖ್ಯ ಬಹು। ಕಬೀರ್ ಹಿಮಾಮಿ ಸಖಾಫಿ ಗೋಳಿಯಡ್ಕ ಆಗಮಿಸಲಿದ್ದಾರೆ.

ಫೆಬ್ರವರಿ 4ರ ಆದಿತ್ಯವಾರ ಬಹು। ಅಸ್ಥಯ್ಯದ್ ಇಲ್ಯಾಸ್ ಕಾಮಿಲ್‌ ಸಖಾಫಿ ಅಲ್ ಹೈದ್ರೋಸಿ ತಂಬಳ್ (ಎರುಮಾಡ್ ತಂಬಳ್‌) ಇವರು ದುಆಶೀರ್ವಚನ ನೀಡಲಿದ್ದಾರೆ.

ಇನ್ನು ಮುಖ್ಯ ಪ್ರಭಾಷಣವನ್ನು ಬಹು। ಅಬೂಬಕ್ಕರ್ ಸಖಾಫಿ ಮಾಡಾವು ಖತೀಬರು, ಖಿಲ್‌ರಿಯ್ಯಾ ಜುಮಾ ಮಸ್ಟಿದ್ ಜೀಲಾನಿ ನಗರ ಕೊಡಂಗೆ ಇವರು ನೀಡಲಿದ್ದಾರೆ.

4ರಂದು ಅಸರ್ ನಮಾಝಿನ ಬಳಿಕ ದಫ್ಟ್ ರಾತೀಬ್ ಕಾರ್ಯಕ್ರಮ ನಡೆಯಲಿದ್ದು, ಇದರ ನೇತೃತ್ವವನ್ನು ಬಹು। ಇಬ್ರಾಹಿಂ ಉಸ್ತಾದ್ ಕನಿಯಾಲ (ದಫ್ಟ್ ಉಸ್ತಾದ್) ವಹಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!