LPG ಆಟೊ ಗ್ಯಾಸ್ ವಿರುದ್ಧ ಹೋರಾಟ ನಡೆಸಿದ ಆಟೊ ರಾಜಕನ್ಮಾರ್ ಯೂನಿಯನ್ ದ.ಕ ತಂಡ. ಕೊನೆಗೂ ಒತ್ತಡಕ್ಕೆ ಮಣಿದ ಗ್ಯಾಸ್ ನಿರ್ವಾಹಕರು
ಮಂಗಳೂರು: ಕಳೆದ ಕೆಲವು ತಿಂಗಳು ಗಳಿಂದ LPG ಗ್ಯಾಸ್ ಪಂಪ್ ನಲ್ಲಿ ಮೈಲೇಜ್ ಕಡಿಮೆ ಎಂಬ ಆರೋಪ ಕೇಳಿಬರುತ್ತಿತ್ತು ಈ ಬಗ್ಗೆ ಆಟೊ ರಾಜಕನ್ಮಾರ್ ಯೂನಿಯನ್ ಗೆ ದೂರು ಬಂದಿತ್ತು.
ಆಟೊ ರಾಜಕನ್ಮಾರ್ ಯೂನಿಯನ್ ತಂಡ ಕಾನೂನಾತ್ಮಕ ವಾಗಿ ಆರಂಭದಲ್ಲಿ ಕೊಣಾಜೆ ಪೊಲೀಸ್ ಠಾಣೆ ಗೆ ಮಾಹಿತಿ ನೀಡಿ ಗ್ಯಾಸ್ ಮಾಲಕರ ಜೊತೆ ಸಮಸ್ಯೆ ತೋಡಿಗೊಂಡಾಗ ಗ್ಯಾಸ್ ಪರೀಕ್ಷಿಸುವಂತೆ ಆಟೊ ರಾಜಕನ್ಮಾರ್ ಯೂನಿಯನ್ ತಂಡದ ಸಾದಿಕ್ ಮತ್ತು ಸಂಸೀರ್ ಅವರ ಆಟೊ ಗ್ಯಾಸ್ ಟ್ಯಾಂಕ್ ಖಾಲಿ ಮಾಡಿ ಒಂದು ಲೀಟರ್ ಗ್ಯಾಸ್ ತುಂಬಿಸಲಾಯಿತು. ನಂತರ ಮೈಲೇಜ್ ಪರೀಕ್ಷಿಸಿದಾಗ ಕೇವಲ ಒಂದು ಲೀಟರ್ ಗೆ 16 ರಿಂದ 17 ಕಿ.ಲೋ ಅಷ್ಟೇ ಲಭಿಸಿತು ಈ ಎಲ್ಲಾ ದಾಖಲೆ ಸಮೀತ ಗ್ಯಾಸ್ ಪಂಪ್ ಮಾಲಕರ ಗಮನಕ್ಕೆ ತಂದ ಆಟೊ ರಾಜಕನ್ಮಾರ್ ಅಧ್ಯಕ್ಷರು ,ಸಾದಿಕ್ ಮತ್ತು ಶಂಸೀರ್ ಕೆದುಂಬಾಡಿ ಗ್ಯಾಸ್ ಪಂಪ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು, ಮತ್ತು ಪಂಪ್ ನಲ್ಲಿ ಕಂಡು ಬಂದು ದೋಷ ಸರಿಪಡಿಸುವಂತೆ ಖಾಡಕ್ ವಾರ್ನಿಂಗ್ ನೀಡಿದರು.
ಆಟೊ ರಾಜಕನ್ಮಾರ್ ಯೂನಿಯನ್ ತಂಡ ಸದಸ್ಯರ ಜೊತೆ ಶುಕ್ರವಾರ ಗ್ಯಾಸ್ ಪಂಪ್ ಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದಾಗ ಎಚ್ಚೆತ್ತುಕೊಂಡ LPG ಗ್ಯಾಸ್ ಪಂಪ್ ಮಾಲಕರು ಶ್ರೀಘ್ರವೇ ಸರಿ ಪಡಿಸಿ ಕೊಡುತ್ತೇನೆ ಅಂಥ ಭರವಸೆ ಮಾತ್ರ ನೀಡಿದಲ್ಲ ನಿನ್ನೆ ಮೆಕಾನಿಕ್ ಕರೆಸಿ ಪಂಪ್ ಮಿಷಿನ್ ಸರಿಪಡಿಸಿದರು ನಿನ್ನೆ ಮಧ್ಯಾಹ್ನ ಸಮಯದಲ್ಲಿ ಯಾವುದೇ ವಾಹನಗಳಿಗೆ ಗ್ಯಾಸ್ ತುಂಬಿಸುತ್ತಿರಲಿಲ್ಲ. ಈದೀಗ ಆಟೊ ರಾಜಕನ್ಮಾರ್ ಯೂನಿಯನ್ ತಂಡಕ್ಕೆ ಮಾತು ನೀಡಿದ ಗ್ಯಾಸ್ ಮಾಲಕರು ಈಗ ಗ್ಯಾಸ್ ತುಂಬಿಸಿ ಪರೀಕ್ಷಿಸಿ ನಂತರ ಮಾಹಿತಿ ನೀಡಿ ಮುಂದೆ ಈ ರೀತಿ ಆಗಲ್ಲ ಖಂಡಿತವಾಗಿಯೂ ಉತ್ತಮ ಮೈಲೇಜ್ ಸಿಗಲಿದೆ ಅಂಥ ಆಟೊ ರಾಜಕನ್ಮಾರ್ ಅಧ್ಯಕ್ಷರಿಗೆ ಭರವಸೆ ನೀಡಿದ್ದಾರೆ. ಈ ಹೋರಾಟದಲ್ಲಿ ಆಟೊ ರಾಜಕನ್ಮಾರ್ ಯೂನಿಯನ್ ಅಧ್ಯಕ್ಷ ರಾದ ಸಿದ್ದೀಕ್ ಮುಡಿಪು , ಲೆಕ್ಕಪರಿಶೋಧಕರಾದ ಶಂಸೀರ್ ಕೆದುಂಬಾಡಿ,ಗ್ರೂಪ್ ಉಸ್ತುವಾರಿ ಸಾದಿಕ್ H ಕಲ್ ಮತ್ತು ಜೊತೆಗಿದ್ದರು
ಈ ಬಗ್ಗೆ ಸ್ಪಷ್ಟಪಡಿಸಿದ ಸಿದ್ದೀಕ್ ಮುಡಿಪು ಮುಂದೆ ಮಿಷಿನ್ ದೋಷ ಕಂಡು ಬಂದರೆ ಕಾನೂನ್ಮತಕ ಹೋರಾಟ ಮಾಡುತ್ತೇವೆ ಅಗತ್ಯ ಬಂದರೆ ನ್ಯಾಯಲಯದ ಮೆಟ್ಟಿಲು ಹತ್ತುದಕ್ಕು ಹಿಂಜರಿಯಲ್ಲ ಅಂಥ ಹೇಳಿಕೆ ನೀಡಿದ್ದಾರೆ, ಆಟೊ ರಾಜಕನ್ಮಾರ್ ಸದಸ್ಯರಿಗೆ ಮತ್ತು ಜಿಲ್ಲೆಯ ಆಟೊ ಚಾಲಕರಿಗೆ ಅನ್ಯಾಯವಾದರೆ ಸುಮ್ಮನೆ ಇರುವ ಪ್ರಶ್ನೆ ನೇ ಇಲ್ಲ ಎಂದಿದ್ದಾರೆ.