ವಿಟ್ಲ; ಕೇಂದ್ರ ಜುಮಾ ಮಸೀದಿ-ಹೊರೈಝನ್ ಸ್ಕೂಲ್ : ಗಣರಾಜ್ಯೋತ್ಸವ.
ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿ ಹಾಗೂ ಅದರ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ಹಾಗೂ ಯೂತ್ ವಿಂಗ್ ವತಿಯಿಂದ 75 ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಖತೀಬ್ ಮಹಮ್ಮದ್ ನಸೀಹ್ ದಾರಿಮಿ ದುವಾ ನೆರವೇರಿಸಿದರು.
ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು ಹಾಗೂ ಶಾಲಾ ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್ ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿ ಗಣರಾಜ್ಯದ ಸಂದೇಶವನ್ನು ನೀಡಿದರು.
ಎಲ್ಲಾ ವಿದ್ಯಾರ್ಥಿಗಳು ವಿಟ್ಲ ಕೇಂದ್ರ ಜುಮಾ ಮಸೀದಿಯಿಂದ ಮೆರವಣಿಗೆ ಮೂಲಕ ನಾಡ ಕಚೇರಿ ತನಕ ಸಾಗಿ ಪೇಟೆಯ ಕಸವನ್ನು ಹೆಕ್ಕುವ ಮೂಲಕ ಸ್ವಚ್ಚತೆಯ ಸಂದೇಶವನ್ನು ಸಾರಿದರು.

ಮಸೀದಿಯ ಉಪಾಧ್ಯಕ್ಷ ಮಹಮ್ಮದ್ ಗಮಿ,ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಕೋಶಾಧಿಕಾರಿ ಶರೀಫ್ ಪೊನ್ನೋಟು, ಶಾಲೆಯ ಕಾರ್ಯದರ್ಶಿ ನೋಟರಿ ಅಬೂಬಕರ್,ಟ್ರಸ್ಟ್ ಗಳಾದ ಅಝೀಝ್ ಸನ, ಇಕ್ಬಾಲ್ ಶೀತಲ್, ಹಮೀದ್ ಬದ್ರಿಯಾ, ಇಸಾಕ್ ಸಾಹೇಬ್, ಇಕ್ಬಾಲ್ ಹಳೆಮನೆ ,ವಿ.ಪಿ .ಅಶ್ರಫ್ ,ಮುಸ್ತಫಾ ಮೇಗಿನಪೇಟೆ ಮುಂತಾದವರು ಉಪಸ್ಥಿತರಿದ್ದರು
ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಸ್ವಾಗತಿಸಿದರು
ಶಿಕ್ಷಕಿ ರಾಹಿಸ್ತಾ ಬೇಗಂ ನಿರೂಪಿಸಿದರು.





